ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ 119ನೇ ಜನ್ಮದಿನವನ್ನು ಶನಿವಾರ ಆಚರಣೆ ಮಾಡಲಾಗುತ್ತಿದೆ. ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತಾಜೀ ಅವರಿಗೆ ಸಂಬಂಧಪಟ್ಟ ಕೆಲವೊಂದು ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಲಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮೋದಿ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದು, ಈ ವೇಳೆ ನೇತಾಜೀ ಅವರ 12ಕ್ಕೂ ಹೆಚ್ಚು ಸಂಬಂಧಿಕರು ಹಾಜರಿರಲಿದ್ದಾರೆ.
70ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ನಡೆದಿದೆ ಎನ್ನಲಾದ ನೇತಾಜೀ ಅವರ ಸಾವು ಪ್ರಕರಣ ಇದುವರೆಗೆ ಬಿಡಿಸಲಾಗದ ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ಅಕ್ಟೋಬರ್ನಲ್ಲಿ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದ ಮೋದಿ, ದಾಖಲೆಗಳನ್ನು ಸಾರ್ವಜನಿಕಗೊಳಿಸುವುದಾಗಿ ಹೇಳಿದ್ದರು.
’ನ್ಯಾಷನಲ್ ಆರ್ಚಿವ್ಸ್ ಆಫ್ ಇಂಡಿಯಾ ನೇತಾಜೀಗೆ ಸಂಬಂಧಪಟ್ಟ 100 ದಾಖಲೆಗಳನ್ನು ಬಹಿರಂಗಪಡಿಸಲಿದೆ ಮತ್ತು ಇದನ್ನು ಡಿಜಟಲೀಕರಣಗೊಳಿಸಲಿದೆ. ಇದರ ಡಿಜಟಲ್ ಕಾಪಿಗಳನ್ನು ಮೋದಿ ಸಾರ್ವಜನಿಕಗೊಳಿಸಲಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ಸಮಿತಿಗಳು ನೇತಾಜೀ ವಿಮಾನ ಅಪಘಾತದಲ್ಲಿ ಮೃತರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿವೆ. ಆದರೆ ೩ನೇ ಸಮಿತಿ ಮತ್ತು ಅವರ ಸಂಬಂಧಿಕರು ಸೇರಿದಂತೆ ಹಲವಾರು ಮಂದಿ ಇದನ್ನು ತಳ್ಳಿ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.