ಜೋಹನ್ಸ್ಬರ್ಗ್: ಮಹಾತ್ಮ ಗಾಂಧಿಯವರ ಪುತ್ಥಲಿಗೆ ದುಷ್ಕರ್ಮಿಗಳು ಗುಂಪೊಂದು ಬಿಳಿ ಬಣ್ಣ ಎರಚಿ ಅವಮಾನ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಗುಂಪೊಂದು ಕಾರಿನಲ್ಲಿ ಬಂದು ಗಾಂಧೀಜಿ ಪ್ರತಿಮೆಗೆ ಮತ್ತು ಸುತ್ತಮುತ್ತ ಬರೆಯಲಾಗಿದ್ದ ಅವರ ಚರಿತ್ರೆಗೆ ಬಿಳಿ ಬಣ್ಣ ಎರಚಿ ವಿರೂಪಗೊಳಿಸಿದೆ. ಅಲ್ಲದೇ ಸ್ಥಳದಲ್ಲಿ ಜನಾಂಗೀಯವಾದಿ ಗಾಂಧಿ ಪ್ರತಿಮೆಯನ್ನು ಇಲ್ಲಿಂದ ಖಾಲಿ ಮಾಡಬೇಕು ಎಂಬ ಸಂದೇಶವುಳ್ಳ ಪತ್ರವನ್ನು ಬಿಸಾಕಿದ್ದಾರೆ.
ಗಾಂಧೀಜಿಯವರನ್ನು ಯುವ ವಕೀಲನ ರೂಪದಲ್ಲಿ ತೋರಿಸಲಾಗಿರುವ ವಿಶ್ವದ ಏಕೈಕ ಪ್ರತಿಮೆ ಇದಾಗಿದೆ. ಜೋಹನ್ಸ್ಬರ್ಗ್ನಲ್ಲಿ ಈ ಪ್ರತಿಯಿದ್ದು, ಈ ಸ್ಥಳಕ್ಕೆ ಗಾಂಧೀ ಸ್ಕ್ವಾರ್ ಎಂದೇ ಕರೆಯಲಾಗುತ್ತದೆ. ಗಾಂಧಿಯನ್ನು ಜನಾಂಗೀಯವಾದಿ ಎಂದು ನಿಂದಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇವರ ಕೈಯಲ್ಲಿ ದಕ್ಷಿಣಆಫ್ರಿಕಾದ ಆಡಳಿತರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಧ್ವಜವಿತ್ತು ಎನ್ನಲಾಗಿದೆ.
ಬಣ್ಣ ಎರಚಿ ಓಡುವ ವೇಳೆ ಒಬ್ಬನನ್ನು ಬಂಧಿಸಲಾಗಿದೆ. ಆದರೆ ಈತ ಘಟನೆಯ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ. ತನ್ನವರು ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ, ನಾವು ಗಾಂಧಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟವರು ಎಂದು ಆಫ್ರಿಕನ್ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.