ಸಿಂಗಾಪುರ: ಇಲ್ಲಿಯ ಕಂಪೆನಿಯೊಂದರ ಆರ್ಥಿಕ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮೂಲದ ಮಹಿಳೆ, ತನ್ನ ಕಂಪೆನಿಯಿಂದ 470,000 ಡಾಲರ್ಗೂ ಹೆಚ್ಚು ಹಣ ದುರ್ಬಳಕೆ ಮಾಡಿದ್ದು, ಆಕೆಗೆ 3 ವರ್ಷ ಹಾಗೂ 10 ತಿಂಗಳು ಜೈಲು ಸಜೆ ವಿಧಿಸಲಾಗಿದೆ.
ಸ್ಮಿತಾ ಸಲಿಲ್ ಮಹತ್ರೆ 2008ರಿಂದ 2013ರ ನಡುವೆ ಕಂಪೆನಿಯ ಹಣ ದುರುಪಯೋಗದ 6 ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.
ಎಸರ್ಚ್ ಪ್ಯಾಸಿಫಿಕ್ ಸಮೂಹಕ್ಕೆ ಸೇರಿದ ಹಣ ದುರುಪಯೋಗದ ವಿಶ್ವಾಸ ದ್ರೋಹದ 3 ಆರೋಪಗಳ ದೋಷಿ ತಾನೆಂದು ಸ್ಮಿತಾ ಒಪ್ಪಿಕೊಂಡಿದ್ದಾರೆ.
ಕಂಪೆನಿಯ ಖಾತೆ ಮತ್ತು ಆಡಳಿತ ಕಾರ್ಯನಿರ್ವಹಣಾಧಿಕಾರಿಯಾಗಿ 2006ರಲ್ಲಿ ಕಂಪೆನಿಗೆ ಸೇರಿಕೊಂಡ ಅವರು, ಹಣಕಾಸು ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಂಪೆನಿಯ ಬ್ಯಾಂಕ್ ಖಾತೆ ಹಾಗೂ ಹಣ ವರ್ಗಾವಣೆ ಕಾರ್ಯ ನಿರ್ವಹಸಿತ್ತಿದ್ದ ಅವರು, ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ ಎಂದು ಕಂಪೆನಿಯ ಉಪ ಪಬ್ಲಿಕ್ ಪ್ರಾಸೆಕ್ಯೂಟರ್ ವಿನ್ಸೆಂಟ್ ಓಂಗ್ ತಿಳಿಸಿದ್ದಾರೆ.
ಆದಾಗ್ಯೂ ಲೆಕ್ಕಕ್ಕೆ ಸಿಗದ ಒಟ್ಟು 277,254 ಡಾಲರ್ ಮೊತ್ತವನ್ನು ಆಕೆ ಹಿಂದಿರುಗಿಸಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.