ಶ್ರೀಹರಿಕೋಟ: ಭಾರತ ತನ್ನ 5ನೇ ನೌಕಾಯಾನ ಉಪಗ್ರಹ IRNSS-1E ಅನ್ನು ಜ.20ರಂದು ಶ್ರೀಹರಿಕೊಟ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಳಿಸಿದೆ.
320 ಟನ್(1425 ಕೆ.ಜಿ.) ತೂಕ, 44 ಮೀ. ಉದ್ದದ ಈ ರಾಕೆಟ್ನ್ನು ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಭೂಮಿಯಿಂದ 503 ಕಿ.ಮೀ. ಎತ್ತರದ ಉಪ ಭೂಸ್ಥಾಯಿ ಕಕ್ಷೆಯಲ್ಲಿ ಉಡಾವಣೆಗೊಳಿಸಲಾಗಿದೆ.
ಈ ರಾಕೆಟ್ನ ನಾಲ್ಕು ಇಂಧನ ಟ್ಯಾಂಕ್ಗಳಲ್ಲಿ ದ್ರವ್ಯರೂಪದ ಇಂಧನ ತುಂಬಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹ ನಿರ್ದೇಶಕ ಎಂ. ಅನ್ನಾದುರೈ ಹೇಳಿದ್ದಾರೆ.
ಭಾರತದ ಏಳು ನೌಕಾಯಾನ ಉಪಗ್ರಹಗಳ ಪೈಕಿ ಐದನೇ ಉಪಗ್ರಹ (IRNSS-1E) ಉಡಾವಣೆಗೊಂಡಿದ್ದು, ಇದನ್ನು ಹೊತ್ತೊಯ್ದಿರುವ ವಾಹಕ ಪಿಎಸ್ಎಲ್ವಿ-ಸಿ31 ವಾಯು ಮತ್ತು ಸಾಗರೋತ್ತರ ಸಂಚರಣೆಗೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಚರಣಾ ವ್ಯವಸ್ಥೆಯನ್ನು ಭೂಮಿತೀಯ ಮಾಹಿತಿ ಗ್ರಹಣ, ವಿಪತ್ತು ನಿರ್ವಹಣೆ, ಮೊಬೈಲ್ ಫೋನ್ಗಳ ವಿಲೀನ, ಚಾಲಕರಿಗೆ ಧ್ವನಿ ಮತ್ತು ದೃಶ್ಯ ಸಂಚರಣೆ, ಮ್ಯಾಪಿಂಗ್, ಟ್ರ್ಯಾಕಿಂಗ್, ಹಾಗೂ ಫ್ಲೀಟ್ ನಿರ್ವಹಣೆ ಮುಂತಾದವುಗಳಿಗೆ ಬಳಸಲಾಗುವುದು ಎಂದು ಹೇಳಿದ್ದಾರೆ.
ಇನ್ನುಳಿದ 2 ಉಪಗ್ರಹಗಳನ್ನು ಮಾರ್ಚ್ ಅಂತ್ಯದೊಳಗೆ ಉಡಾವಣೆಗೊಳಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.