ಲಂಡನ್: ಬ್ರಿಟನ್ಗೆ ಆಗಮಿಸಿ ಎರಡೂವರೆ ವರ್ಷದೊಳಗೆ ಇಂಗ್ಲೀಷ್ ಪರೀಕ್ಷೆಯನ್ನು ಪಾಸು ಮಾಡದ ವಲಸಿಗರಿಗೆ ನೆಲೆ ನಿಲ್ಲಲು ಅವಕಾಶ ಕೊಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ.
ಬ್ರಿಟನ್ನಲ್ಲಿ ಒಟ್ಟು 190,000 ಮುಸ್ಲಿಂ ಮಹಿಳೆಯರಿಗೆ ಇಂಗ್ಲೀಷ್ ಬರುವುದಿಲ್ಲ ಅಥವಾ ಸ್ವಲ್ಪವೇ ಇಂಗ್ಲೀಷ್ ತಿಳಿದುಕೊಂಡಿದ್ದಾರೆ, ಆಕ್ರಮಣಕಾರಿಯಾದ ಪುರುಷರು ಇವರಿಗೆ ಇಂಗ್ಲೀಷ್ ಕಲಿಯಲು ಅನುವು ಮಾಡಿಕೊಡುತ್ತಿಲ್ಲ. ಅಂತಹವರ ವಿರುದ್ಧ ಕಠಿಣಕ್ರಮಕೈಗೊಳ್ಳುತ್ತೇವೆ ಎಂದು ಡೇವಿಡ್ ಹೇಳಿದ್ದಾರೆ.
ಇಂಗ್ಲೀಷ್ ಪ್ರಾವೀಣ್ಯತೆ ಇಲ್ಲದೇ ಹೋದರೆ ಲಂಡನ್ನಲ್ಲಿ ನೆಲೆಸುವ ಅವಕಾಶ ಕಳೆದುಕೊಳ್ಳಲಿದ್ದೀರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರಿಗೆ ಇಂಗ್ಲೀಷ್ ಕಲಿಸಲು ಸರ್ಕಾರ 20 ಮಿಲಿಯನ್ ಪೌಂಡ್ಗಳನ್ನು ಖರ್ಚು ಮಾಡುತ್ತಿದೆ. ತಮ್ಮ ಸಂಗಾತಿಗಳೊಂದಿಗೆ ಬಂದವರು ಇಂಗ್ಲೀಷ್ನ್ನು ಕಲಿತಿದ್ದಾರೆಯೇ ಎಂಬುದನ್ನು ತಿಳಿಯಲು ಅಕ್ಟೋಬರ್ನಿಂದ ಪರೀಕ್ಷೆ ಆರಂಭಿಸುತ್ತೇವೆ ಎಂದಿದ್ದಾರೆ.
ಬ್ರಿಟಿಷ್ ಸಮಾಜದೊಂದಿಗೆ ಹೆಚ್ಚಾಗಿ ಬೆರೆಯದವರು ತೀವ್ರಗಾಮಿ ಮನೋಸ್ಥಿತಿ ಬೆಳೆಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.