ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭ ಉಗ್ರರಿಂದ ಅಪಹರಣಕ್ಕೊಳಪಟ್ಟರು ಎನ್ನಲಾದ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ರವರ ಪಾಲಿಗ್ರಾಫ್ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ತನಿಖಾ ದಳ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಗಳಿವೆ.
ಸಲ್ವಿಂದರ್ ಸಿಂಗ್ ಗುರುದಾಸ್ಪುರ ಸಿಖ್ ದೇವಾಲಯವೊಂದಕ್ಕೆ ಭೇಟಿ ನೀಡಿರುವ ಬಗ್ಗೆ ನೀಡಿದ ಸಮಯದ ವಿವರ ಹಾಗೂ ಅಲ್ಲಿಯ ಮುಖ್ಯಸ್ಥ ನೀಡಿರುವ ಸಮಯದ ವಿವರದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಗುರುದಸ್ಪುರ ದೇವಾಲಯದಿಂದ ಅಪಹರಿಸಲಾಗಿದೆ ಎನ್ನಲಾದ ಸ್ಥಳಕ್ಕೆ 10 ಕಿ.ಮೀ. ಮಾತ್ರ ಇದೆ. ಆದರೆ ಈ ಮಾರ್ಗವನ್ನು ಕ್ರಮಿಸಲು 3 ಗಂಟೆಗಳ ಸಮಯ ತೆಗೆದುಕೊಳ್ಳಲು ಕಾರಣ ಏನು ಎಂದು ಸಲ್ವಿಂದರ್ ವಿವರಿಸಲು ವಿಫಲರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಸಲ್ವಿಂದರ್ ವಿಚಾರಣೆ ನಡೆಸಲು ತನಿಖಾ ಸಂಸ್ಥೆ ಸಮನ್ಸ್ ಜಾರಿಗೊಳಿಸಿದೆ. ಸಲ್ವಿಂದರ್ ಸಿಂಗ್ ನೀಡಿರುವ ಹೇಳಿಕೆ ಹಾಗೂ ಪಂಜಾಬ್ ಪೊಲೀಸ್ ನೀಡಿರುವ ವಿವರಣೆಯಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿದೆ.
ಸಲ್ವಿಂದರ್ ಸಿಂಗ್, ಆತನ ಗೆಳೆಯ ರಾಜೇಶ್ ವರ್ಮಾ ಹಾಗೂ ಅಡುಗೆಯವನಾದ ಮದನ್ ಲಾಲ್ನನ್ನು ಡಿ.೩೧ರ ಮಧ್ಯರಾತ್ರಿ ಭಯೋತ್ಪಾದಕರು ಅಪಹರಿಸಿದ್ದರು.
ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಸಲ್ವಿಂದರ್ನನ್ನು ಗುರುದಾಸ್ಪುರ ಎಸ್ಪಿ ಸ್ಥಾನದಿಂದ ಕೆಳಗಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.