ನವದೆಹಲಿ: ಸಮ-ಬೆಸ ನಿಯಮವನ್ನು ಯಶಸ್ವಿಗೊಳಿಸಿದ ದೆಹಲಿ ಜನತೆಗೆ ಧನ್ಯವಾದಗಳನ್ನು ಅರ್ಪಿಸಲು ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಹಿಳೆಯೊಬ್ಬಳು ಇಂಕ್ ಎರಚಿದ್ದಾಳೆ.
ದೆಹಲಿಯ ಚತ್ರಸಾಲ್ ಸ್ಟೇಡಿಯಂನಲ್ಲಿ ಕೇಜ್ರಿವಾಲ್ ಭಾಷಣ ಆರಂಭಿಸಿದ ವೇಳೆಯೇ ಸೆಕ್ಯೂರಿಟಿಯನ್ನು ಮುರಿದು ಅವರ ಸಮೀಪಕ್ಕೆ ಬಂದ ಮಹಿಳೆ ಅವರ ಮೇಲೆ ಇಂಕ್ ಎರಚಿದ್ದಾಳೆ.
ಮಹಿಳೆಯನ್ನು ಭಾವನಾ ಎಂದು ಗುರುತಿಸಲಾಗಿದ್ದು, ತಾನು ಪಂಜಾಬ್ನ ಎಎಪಿ ಘಟಕ ಸದಸ್ಯೆ ಎಂದು ಹೇಳಿಕೊಂಡಿದ್ದಾಳೆ. ಇದೀಗ ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಎಎಪಿಯವರು ಸಿಎನ್ಜಿಯಲ್ಲಿ ಅಕ್ರಮವನ್ನು ಎಸಗಿದ್ದಾರೆ, ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆದರೆ ಇದರಲ್ಲಿ ರಾಜಕೀಯ ಪಿತೂರಿ ಇದೆ ಎಂದು ಎಎಪಿ ಆರೋಪಿಸಿದೆ.
ಇದೊಂದು ಭದ್ರತಾ ವೈಫಲ್ಯ. ಇಡೀ ಸಂಪುಟವೇ ಇಲ್ಲಿ ಹಾಜರಿದ್ದರೂ ಪೊಲೀಸರು ಇರಲಿಲ್ಲ. ಪೊಲೀಸರು ಬಿಜೆಪಿ ಕಂಟ್ರೋಲ್ನಲ್ಲಿದ್ದಾರೆ. ಒಂದು ವೇಳೆ ಆಸಿಡ್ ಅಥವಾ ಬಾಂಬ್ ದಾಳಿಯಾಗಿದ್ದರೆ ಏನು ಗತಿ? ಹೈಅಲರ್ಟ್ನಲ್ಲಿದ್ದೇವೆ ಎನ್ನುವ ಪೊಲೀಸರ ಕಾರ್ಯ ಇದೇನಾ? ಘಟನೆಯ ಹಿಂದೆ ಬಿಜೆಪಿಯ ಪಿತೂರಿ ಇರುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಈ ಹಿಂದೆಯೂ ಇಂತಹ ಅನೇಕ ದಾಳಿಗಳು ಕೇಜ್ರಿವಾಲ್ ಅವರ ಮೇಲಾಗಿದೆ. ಸಿಎಂ ಆದ ಬಳಿಕವೂ ಇದು ಮುಂದುವರೆಯುತ್ತಿರುವುದು ದುರಾದೃಷ್ಟವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.