ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪೆನಿಯು ತನ್ನ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಮೊಬೈಲ್ ದರಗಳಲ್ಲಿ ಶೇ.80 ಕಡಿತಗೊಳಿಸಲಿದ್ದು, ಈ ಅನುಕ್ರಮ ಜ.16ರಿಂದ ಜಾರಿಗೆ ಬರಲಿದೆ. ಕಂಪೆನಿಯು ಈ ಹಿಂದೆ ತನ್ನ ಹೊಸ ಗ್ರಾಹಕರಿಗೆ ಈ ಯೋಜನೆಯನ್ನು ಜಾರಿಗೆ ತಂದಿತ್ತು.
ಪ್ರೀಪೇಯ್ಡ್ ಗ್ರಾಹಕರ ಪ್ರತಿ ನಿಮಿಷ ಹಾಗೂ ಪ್ರತಿ ಸೆಕೆಂಡ್ ಈ ಎರಡೂ ಬಿಲ್ಲಿಂಗ್ ಪ್ಲಾನ್ ಹೊಂದಿದ ಗ್ರಾಹಕರ ಮೊಬೈಲ್ ದರ ಇಳಿಸಲಾಗಿದೆ.
ಹೊಸ ಟ್ಯಾರಿಫ್ನೊಂದಿಗೆ ಸ್ಪರ್ಧಾತ್ಮಕವಾಗಿ ನಡೆಯುತ್ತಿದ್ದು, ಅತಿ ದೊಡ್ಡ ನೆಟ್ವರ್ಕ್ ಕವರೇಜ್ ಹೊಂದಿದೆ. ಎರಡು ಹೊಸ ಟ್ಯಾರಿಫ್ಗಳನ್ನು ಜಾರಿಗೊಳಿಸಲಾಗಿದೆ ಎಂದು ಬಿಎಸ್ಎನ್ಎಲ್ ನಿಗಮ ಅಧ್ಯಕ್ಷ ಆರ್. ಕೆ. ಮಿತ್ತಲ್ ಹೇಳಿದ್ದಾರೆ.
ಬಿಎಸ್ಎನ್ಎಲ್ ತನ್ನ ಸೇವೆಗಳನ್ನು ಸುಧಾರಿಸಲು ಮತ್ತು ಹೆಚ್ಚು ಗ್ರಾಹಕರನ್ನು ಆಕರ್ಶಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೊಬೈಲ್ ನಂಬರ್ ಪೋರ್ಟಬಿಲಿಟಿ(ಎಂಎನ್ಪಿ) ವ್ಯವಸ್ಥೆಯು ಧನಾತ್ಮಕವಾಗಿ ಸಾಗಿದ್ದು, 1,57, 564 ಮಂದಿ ಬಿಎಸ್ಎನ್ಎಲ್ ನೆಟ್ವರ್ಕ್ಗೆ ವರ್ಗಾವಣೆಗೊಂಡರೆ, 1,24,158 ಗ್ರಾಹಕರು ಬಿಎಸ್ಎನ್ಎಲ್ನಿಂದ ಇತರ ನೆಟ್ವರ್ಕ್ಗಳಿಗೆ ವರ್ಗಾಯಿಸಿದ್ದಾರೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.