ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಗುರುವಾರ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಮುದೂಡಲಾಗಿದ್ದು, ಜನವರಿ ತಿಂಗಳಲ್ಲೇ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮ್ಮಣ್ಯನ್ ಜೈಶಂಕರ್ ಹಾಗೂ ಪಾಕ್ನ ಅಯಿಝಾಜ್ ಅಹ್ಮದ್ ದೂರವಾಣಿ ಸಂಪರ್ಕ ನಡೆಸಿದ್ದು, ಯಾವುದೇ ಹಂತದಲ್ಲಿ ವಿನಾಕಾರಣ ಮಾತುಕತೆಯಲ್ಲಿ ವಿಳಂಬವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಯಿಝಾಜ್ ಅಹ್ಮದ್ ಜ.18 ವರೆಗೆ ಅಫ್ಘಾನಿಸ್ಥಾನದಲ್ಲಿ ಅಮೇರಿಕ ಹಾಗೂ ಚೀನಾ ಒಳಗೊಂಡ ನಾಲ್ಕು ರಾಷ್ಟ್ರಗಳ ಸಮನ್ವಯ ಗುಂಪು ಸಭೆಯಲ್ಲಿ ಕಾರ್ಯನಿರತರಾಗಿದ್ದು, ಜ.೨೦ರ ನಂತರ ಭಾರತದೊಂದಿಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ಯಾರಿಸ್ ಪ್ರವಾಸದಿಂದ ಗುರುವಾರ ಹಿಂದಿರುಗಿದ್ದು, ಪ್ರಧಾನಿ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಜೈಶಂಕರ್ ಅವರನ್ನೊಳಗೊಂಡ ವಿಶೇಷ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.