ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಾದ ಇಸ್ರೇಲ್ ಹಾಗೂ ಪ್ಯಾಲೆಸ್ಟೇನ್ಗೆ ರಾಷ್ಟ್ರಗಳೊಂದಿಗಿನ ಸಂಬಂಧ ಇನ್ನಷ್ಟು ಬಲಪಡಿಸುವ ಮತ್ತು ಸದ್ಭಾವನೆ ನಿರ್ಮಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜ.17-18ರಂದು ಈ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ಪ್ರವಬ್ ಮುಖರ್ಜಿ ಅವರು ಮುರು ತಿಂಗಳ ಹಿಂದೆ ಈ ರಾಷ್ಟ್ರಗಳಿಗೆ ಮಹತ್ವದ ಭೇಟಿ ನೀಡಿದ್ದರು.
ವಿದೇಶಾಂಗ ಸಚಿವೆಯಾದ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಸುಷ್ಮಾ ಅವರ ಮೊದಲ ಭೇಟಿ ಇದಾಗಲಿದೆ. ಜನವರಿ ೧೭ರಂದು ಪ್ರಥಮವಾಗಿ ಪ್ಯಾಲೆಸ್ಟೇನ್ಗೆ ಭೇಟಿ ನೀಡಲಿರುವ ಅವರು ದ್ವಿಪಕ್ಷೀಯ ಸಂಬಂಧಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಪರಸ್ಪರ ಹೊಂದಾಣಿಕೆಯನ್ನು ನಿರ್ವಹಿಸುವ ವಿಚಾರವಾಚಿ ಚರ್ಚಿಸಲಿದ್ದಾರೆ. ಈ ವೇಳೆ ಪ್ಯಾಲೆಸ್ಟೇನ್ನ ಅಭಿವೃದ್ಧಿ, ರಾಜಕೀಯ, ರಾಜತಾಂತ್ರಿಕತೆಗೆ ಭಾರತದ ಬೆಂಬಲಕ್ಕೂ ಒತ್ತು ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಜ.18ರಂದು ಸುಷ್ಮಾ ಅವರು ಇಸ್ರೇಲ್ಗೆ ತೆರಳಲಿದ್ದಾರೆ. ಸ್ವರಾಜ್ ಅವರ ಇಸ್ರೇಲ್ ಪ್ರವಾಸವು ಈ ವರ್ಷಾತ್ಯದೊಳಗೆ ಭಾರತಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಸಂಭಾವ್ಯ ಭೇಟಿಯ ದೃಷ್ಟಿಯಿಂದ ಮಹತ್ವದ್ದೆನಿಸಿದೆ. ಈ ನಡುವೆ ಪ್ರಧಾನಿ ಮೋದಿ ಕೂಡ ಟೆಲ್ ಅವೀವ್ಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾರತವು ಇಸ್ರೇಲ್ನ ಅತಿ ದೊಡ್ಡ ಶಸ್ತ್ರಾಸ್ತ್ರ ಖರೀದಿದಾರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.