ಭೋಪಾಲ್; ಇದು ಅಚ್ಚರಿಯಾದರೂ ನಿಜ. ಮಧ್ಯಪ್ರದೇಶದ ಎರಡೂವರೆ ವರ್ಷದ ಪುಟಾಣಿ ಮಗವೊಂದು 50 ಮಂತ್ರಗಳನ್ನು ತಡವರಿಸದೆ ಪಠಿಸುತ್ತದೆ, ಮಾತ್ರವಲ್ಲ 300 ಶಬ್ದಗಳ ಸ್ಪೆಲ್ಲಿಂಗ್ ಹೇಳುತ್ತದೆ. 100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ಶಿವಪುರಿ ಜಿಲ್ಲೆಯ ನಮಃ ಶಿವಾಯ್ ಎಂಬ ಪುಟಾಣಿಯೇ ಈ ಅಸಾಮಾನ್ಯ ಜ್ಞಾಪಕ ಶಕ್ತಿಯನ್ನು ಹೊಂದಿರುವ ಮಗು. ತೊದಲು ಮಾತಿನಿಂದಾಗಿ ಉಚ್ಚಾರಣೆಯಲ್ಲಿ ಸ್ಪಷ್ಟತೆ ಇರದಿದ್ದರೂ ಇದು ನೀಡುವ ಉತ್ತರ ಮಾತ್ರ ನೂರು ಪ್ರತಿಶತ ಸರಿಯಾಗಿರುತ್ತದೆ.
ಧಾರ್ಮಿಕ ಕುಟುಂಬದಲ್ಲಿ ಹುಟ್ಟಿದ ಶಿವಾಯ್ಗೆ ಎರಡೂವರೆ ವರ್ಷವಷ್ಟೇ. ಆತನ ವಯಸ್ಸಿನಲ್ಲಿ ಹೆಚ್ಚಿನ ಮಕ್ಕಳಿಗೆ ತಮ್ಮ ಕುಟುಂಬಿಕರ ಹೆಸರೇ ಸರಿಯಾಗಿ ಬರುವುದಿಲ್ಲ. ಅಂತಹುದರಲ್ಲಿ ಈತ 50 ಮಂತ್ರ, 300 ಶಬ್ದದ ಸ್ಪೆಲ್ಲಿಂಗ್ ಹೇಳುತ್ತಾನೆ. 100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.
ಪ್ರಧಾನಿ, ರಾಷ್ಟ್ರಪತಿ, ರಾಜ್ಯಗಳ, ರಾಜ್ಯ ರಾಜಧಾನಿಗಳ, ತಿಂಗಳುಗಳ ಹೆಸರನ್ನು ಪಟಪಟನೇ ಹೇಳುತ್ತಾನೆ. ಈತ ಎರಡು ವರ್ಷದವನಿದ್ದಾಗ ಈತನ ಅಜ್ಜ ಇವನಿಗೆ ಮಂತ್ರಗಳನ್ನು ಕಲಿಸಿಕೊಡಲು ಆರಂಭಿಸಿದ್ದಾರೆ.
ಸ್ವಾಮೀಜಿಯವರ ಕೋರಿಕೆಯಂತೆ ಈ ಪುಟಾಣಿಯನ್ನು 5 ವರ್ಷಗಳ ಕಾಲ ಸಂಸ್ಕೃತ ಶಾಲೆಗೆ ಸೇರಿಸಲು ಮನೆಯವರು ನಿರ್ಧರಿಸಿದ್ದಾರೆ. ಮುಂದೊಂದು ದಿನ ಈತ ಬಾಲ ವ್ಯಾಸನಾಗುವ ಸಾಧ್ಯತೆಯೂ ಇದೆ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.