ನವದೆಹಲಿ: ಮ್ಯಾಗಿ ನೂಡಲ್ಸ್ನಲ್ಲಿ ಸೀಸ ಮತ್ತು ಗ್ಲೂಟಮೇಟ್ ಆಮ್ಲದ ಪ್ರಮಾಣ ನಿರ್ಧಾರಿತ ಮಟ್ಟದಲ್ಲಿದೆಯೇ ಮತ್ತು ಬಳಸಲು ಸುರಕ್ಷಿತವೇ ಎಂಬ ಬಗ್ಗೆ ಮೈಸೂರು ಸರ್ಕಾರಿ ಪ್ರಯೋಗಾಲಯವು ನಡೆಸಿದ ಪರೀಕ್ಷೆಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮ್ಯಾಗಿಯನ್ನು ಯುವ ಜನಾಂಗ ಹೆಚ್ಚಿನ ಮಟ್ಟದಲ್ಲಿ ಸೇವಿಸುತ್ತಿದ್ದು, ಮ್ಯಾಗಿ ಮೇಲಿನ ನಿಷೇಧ ಹಿಂಪಡೆದಿರುವುದರ ವಿರುದ್ಧ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಮಾಡಿದ ಮನವಿ ಮಾಡಿರುವ ಹಿನ್ನಲೆಯಲ್ಲಿ ಮೈಸೂರು ಪ್ರಯೋಗಾಲಯ ಸ್ಪಷ್ಟೀಕರಣ ನೀಡುವಂತೆ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಾಂಗ ಪೀಠವು ಕೇಳಿಕೊಂಡಿದೆ.
ಮ್ಯಾಗಿಯ ಮಾದರಿಗಳಲ್ಲಿ ಮೋನೋಸೋಡಿಯಂ ಗ್ಲೂಟಮೇಟ್ ಪರೀಕ್ಷೆಗಳ ಬಗ್ಗೆ ಮೈಸೂರು ಪ್ರಯೋಗಾಲಯ ನೀಡಿದ ಎರಡು ಪ್ರತ್ಯೇಕ ವರದಿಗಳನ್ನು ಪ್ರಶ್ನಿಸಿ ಈ ಆದೇಶ ನೀಡಿದೆ.
ಆಹಾರ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಸೀಸದ ಪ್ರಮಾಣ ಸೀಮಿತ ಮಟ್ಟದಲ್ಲದೆ ಎಂದು ನೆಸ್ಲೆ ಇಂಡಿಯಾ ಹೇಳಿಕೊಂಡಿತ್ತು.
ಸೀಸ ಮತ್ತು ಗ್ಲುಟಮೇಟ್ ಪ್ರಮಾಣ ಸೀಮಿತ ಪ್ರಮಾಣದಲ್ಲಿರುವ ಬಗ್ಗೆ ಪ್ರಯೋಗಾಲಯ ಸ್ಪಷ್ಟೀಕರಣ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.