ಚಂಡೀಗಢ: ಹುತಾತ್ಮ ಯೋಧ ವಸಂತ್ ವೇಣುಗೋಪಾಲನ್ ಅವರ ಪತ್ನಿ ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಆಗಿರುವ ಸುಭಾಷಿಣಿ ವಸಂತ್ ಅವರು ಈ ವರ್ಷದ ನೀರಜ್ ಬಾನೋಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಭಾಷಿಣಿ ಅವರು ಹುತಾತ್ಮ ಯೋಧರ ಕುಟುಂಬಗಳ ಏಳಿಗೆಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. 2007ರಲ್ಲಿ ತನ್ನ ಪತಿಯ ಸ್ಮರಣಾರ್ಥ ವಸಂತರತ್ನ ಫೌಂಡೇಶನ್ ಸ್ಥಾಪಿಸಿರುವ ಇವರು, ಅದರ ಮೂಲಕ ಸ್ಕಾಲರ್ಶಿಪ್, ಹುತಾತ್ಮ ಯೋಧರ ಪತ್ನಿಯರಿಗೆ, ಮಕ್ಕಳಿಗೆ ಸಬಲೀಕರಣ ಕಾರ್ಯಕ್ರಮ ಮುಂತಾದವುಗಳನ್ನು ಏರ್ಪಡಿಸಿ ಮೃತ ಯೋಧರ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
ವಸಂತ್ ವೇಣುಗೋಪಾಲನ್ ಅವರು 2008 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದವರು. ಅಶೋಕ್ ಚಕ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸುಭಾಷಿಣಿ ತಮ್ಮ ಪತಿಯ ಬಗ್ಗೆ ’ಫಾರೆವರ್ ಫೋರ್ಟಿ’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಅಪಹೃತ ವಿಮಾನದಿಂದ ಉಗ್ರರ ದಾಳಿಗೂ ಹೆದರದೆ ಪ್ರಯಾಣಿಕರನ್ನು ತುರ್ತು ಬಾಗಿಲಿನ ಮೂಲಕ ಹೊರಗೆ ಕಳುಹಿಸಿ ತಾನು ಗುಂಡೇಟಿಗೆ ಎದೆಗೊಟ್ಟ ದಿಟ್ಟ ಗಗನಸಖಿ ನೀರಜಾ ಬಾನೋಟ್. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.