ಇಸ್ಲಾಮಾಬಾದ್: ಪಠಾನ್ಕೋಟ್ ದಾಳಿಯ ಬಗ್ಗೆ ಕ್ರಮಕೈಗೊಳ್ಳಬೇಕು ಎಂಬ ಭಾರತದ ತೀವ್ರ ಒತ್ತಡಕ್ಕೆ ಪಾಕಿಸ್ಥಾನ ತಲೆಬಾಗಿದ್ದು, ದಾಳಿ ರೂವಾರಿ ಮೌಲಾನಾ ಮಸೂದ್ ಅಝರ್ನನ್ನು ಬಂಧಿಸಿದೆ.
ಆತನ ಸಹೋದರ ಅಬ್ದುಲ್ ರೆಹಮಾನ್ ರಾಫ್ ಮತ್ತು ಇತರ ಜೈಶೇ ಮೊಹಮ್ಮದ್ ಸದಸ್ಯರನ್ನು ಬಂಧಿಸಿ, ಅವರ ಕಛೇರಿಗೆ ಬೀಗ ಜಡಿಯಲಾಗಿದೆ.
ಅಝರ್ ಮತ್ತು ಬಂಧಿತ ಇತರ ಇಬ್ಬರು ಭಯೋತ್ಪಾದಕರು 1999ರಲ್ಲಿ ಭಾರತದ ಜೈಲಿನಲ್ಲಿದ್ದರು, ಆದರೆ ಕಂದಹಾರ್ ವಿಮಾನ ಅಪಹರಣದ ವೇಳೆ 155 ಪ್ರಯಾಣಿಕರ ಸುರಕ್ಷತೆಗಾಗಿ ಇವರನ್ನು ಬಿಡುಗಡೆ ಮಾಡಬೇಕಾಯಿತು.
ಸ್ವತಂತ್ರಗೊಂಡ ಬಳಿಕ ಅಝರ್ ಪಾಕಿಸ್ಥಾನಕ್ಕೆ ತೆರಳಿ ತನ್ನ ಉಗ್ರ ಚಟುವಟಿಕೆಯನ್ನು ಮುಂದುವರೆಸಿದ್ದ. ಕರಾಚಿಯಲ್ಲಿ 10 ಸಾವಿರ ಮಂದಿಯನ್ನು ಉದ್ದೇಶಿಸಿ ‘ಅಮೆರಿಕಾ ಮತ್ತು ಭಾರತ’ವನ್ನು ನಾಶ ಮಾಡುವ ಶಪಥ ಮಾಡಿದ್ದ. ಇಷ್ಟೆಲ್ಲಾ ಆದರೂ ಪಾಕ್ ಸರ್ಕಾರ ಮಾತ್ರ ಸುಮ್ಮನೆ ಕೈಕಟ್ಟಿ ಕುಳಿತಿತ್ತು. ಬಳಿಕ ಆತ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಕಾಶ್ಮೀರದಲ್ಲಿ ಭಯೋತ್ಪಾದನ ದಾಳಿ ನಡೆಸುವ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.