ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತದಿಂದ ಪಾಕಿಸ್ಥಾನಕ್ಕೆ ಟೀ ರಫ್ತು ಶೇ. 42ರಂತೆ ರೂ.116.12 ಕೋಟಿ ತಲುಪಿದೆ. ಎಪ್ರಿಲ್-ನವೆಂಬರ್ ಅವಧಿಯಲ್ಲಿ ಒಟ್ಟಾರೆ ರಫ್ತಿನಲ್ಲಿ ಶೇ.6 ಏರಿಕೆಯೊಂದಿಗೆ ರೂ.2,590.08 ಕೋಟಿಯಿಂದ ರೂ.2,746.04ಕ್ಕೆ ಏರಿಕೆಯಾಗಿದೆ.
ಕಳೆದ ಆರ್ಥಿಕ ವರ್ಷದ ಮೊದಲ 8 ತಿಂಗಳಲ್ಲಿ ಪಾಕಿಸ್ಥಾನಕ್ಕೆ ರಫ್ತು ರೂ.81.61 ಕೋಟಿ ಇದ್ದು, ಇದರ ಸಾಗಣೆ ಪ್ರಮಾಣ ಕೂಡ 9.65 ಮಿಲಿಯನ್ ಕೆ.ಜಿ.ಯಿಂದ 11.65 ಮಿಲಿಯನ್ ಕೆ.ಜಿ.ಗೆ ಹೆಚ್ಚಿದೆ. ಈ ಅವಧಿಯಲ್ಲಿ ಭಾರತದ ಒಟ್ಟು ಟೀ ರಫ್ತು 129.82 ಕೆ.ಜಿ.ಯಿಂದ 141.07 ಕೆ.ಜಿ.ಗೆ ಏರಿಕೆಯಾಗಿದೆ ಎಂದು ಭಾರತದ ಟೀ ಸಮಿತಿ ವರದಿ ತಿಳಿಸಿದೆ.
ಟೀ ಆಮದು ಮಾಡುತ್ತಿರುವ ರಾಷ್ಟ್ರಗಳಾದ ಜರ್ಮನಿ, ಯುಕೆ, ಪೋಲ್ಯಾಂಡ್, ಯುಎಇ, ಶ್ರೀಲಂಕಾ, ಬಾಂಗ್ಲಾದೇಶ ಮುಂತಾದ ರಾಷ್ಟ್ರಗಳಿಗೆ ಕೂಡ ಟೀ ರಫ್ತಿನಲ್ಲಿ ಏರಿಕೆಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ವೇತನ ಸಮಸ್ಯೆಗಳಿಂದಾಗಿ ಈ ವರ್ಷ ಟೀ ಉತ್ಪಾದನೆ ಮಟ್ಟದಲ್ಲಿ ಇಳಿಕೆಯಾಗಿದೆ ಎಂದು ಅದು ತಿಳಿಸಿದೆ.
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಟೀ ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರವಾಗಿದೆ. ಭಾರತವು ಸಿಟಿಸಿ ದರ್ಜೆಯ ಟೀಯನ್ನು ಈಜಿಪ್ಟ್, ಯುಕೆ ಮತ್ತು ವಿವಿಧ ಸಾಂಪ್ರದಾಯಿಕ ವೈವಿಧ್ಯತೆಯ ಟೀಯನ್ನು ಇರಾಕ್, ಇರಾನ್, ರಷ್ಯಾ ದೇಶಗಳಿಗೆ ರಫ್ತು ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.