ಶಿಮ್ಲಾ: ’ಹೆಣ್ಣು ಮಕ್ಕಳ ಉಳಿಸಿ’ ಸಂದೇಶ ಸಾರುವ ಜಾನಪದ ನೃತ್ಯ ಪ್ರದರ್ಶನದಲ್ಲಿ ಹಿಮಾಚಲ ಪ್ರದೇಶದ ಸುಮಾರು 9000 ಕಲಾವಿದರು ಭಾಗವಹಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕುಲ್ಲು ಪಟ್ಟಣದಲ್ಲಿ ನಡೆದ ಕುಲ್ಲು ದಸರಾ ಉತ್ಸವದಲ್ಲಿ ಪಾಲ್ಗೊಂಡ 9,892 ಜಾನಪದ ನೃತ್ಯ ಕಲಾವಿದರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಈವರೆಗೆ ಜಾನಪದ ನೃತ್ಯ ಸಂಬಂಧಿತ ಯಾವುದೇ ದಾಖಲೆಗಳಿಲ್ಲ ಎಂದು ಗಿನ್ನೆಸ್ ವಿಶ್ವದಾಖಲೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕುಲ್ಲು ಜಿಲ್ಲಾಧಿಕಾರಿ ರಾಕೇಶ್ ಕನ್ವರ್ ಹೇಳಿದ್ದಾರೆ.
ಕುಲ್ಲು ನಾಟ್ಟಿ ಎಂದೇ ಕರೆಯಲ್ಪಡುವ ಈ ನೃತ್ಯವನ್ನು ಮಹಿಳಾ ಮತ್ತು ಪುರುಷ ಕಲಾವಿದರು ಅಕ್ಟೋಬರ್ 26, 2015ರಂದು ಪ್ರದರ್ಶಿಸಿದ್ದು, ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಜಾನಪದ ನೃತ್ಯವಾಗಿದೆ ಎಂದು ಕನ್ವರ್ ತಿಳಿಸಿದ್ದಾರೆ.
ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರು ಹೆಣ್ಣು ಮಕ್ಕಳಿಗಾಗಿ ಶ್ರಮಿಸಲು ಪ್ರತಿಜ್ಞೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. 2014ರ ಕುಲ್ಲು ದಸರಾ ಉತ್ಸವದ ಸಂದರ್ಭ 8,540 ಕಲಾವಿದರು ಜಾನಪದ ನೃತ್ಯದಲ್ಲಿ ಭಾಗವಹಿಸಿದ್ದು, ಲಿಮ್ಕಾ ದಾಖಲೆ ಪುಸ್ತಕ ಪ್ರವೇಶಿಸಿತ್ತು.
’ಬೇಟಿ ಹೈ ಅನ್ಮೋಲ್’ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ನೃತ್ಯ ’ಹೆಣ್ಣು ಮಕ್ಕಳ ಉಳಿಸಿ’ ಸಾಮೂಹಿಕ ಜಾಗೃತಿಯ ಸಂದೇಶವನ್ನು ದೇಶದಾದ್ಯಂತ ಹರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.