ಭೋಪಾಲ್: ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ವಿಷಯ ತಜ್ಞರೊಂದಿಗೆ ಸಂವಹನ ನಡೆಸಲು ಮಧ್ಯಪ್ರದೇಶ ಸರ್ಕಾರ ಜನವರಿ ತಿಂಗಳ ಅಂತ್ಯದೊಳಗೆ ‘Gyaan Pitara’ ವೆಬ್ಸೈಟ್ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೆಬ್ಸೈಟ್ ಪ್ರತಿಯೊಂದು ವಿಷಯಕ್ಕೆ ಪಠ್ಯಕ್ರಮ, ಆಡಿಯೋ ವಿಶುವಲ್ ಕ್ಲಿಪ್ಗಳು ಮತ್ತು ಮಾದರಿ ಪುಸ್ತಕಗಳ ಲಿಂಕ್ ಹೊಂದಲಿದೆ. ಇದು ಮಧ್ಯಪ್ರದೇಶ ಶಿಕ್ಷಣ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ ಎಂದು ಸರ್ಕಾರಿ ಶಾಲೆಗಳನ್ನು ನಿರ್ವಹಿಸುತ್ತಿರುವ ರಾಜ್ಯ ಶಿಕ್ಷಾ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ನೀಡುವ ಸಲುವಾಗಿ, ಪಠ್ಯ ವಿಷಗಳ ಬಗ್ಗೆ ಅಡಿಯೋ ವಿಷುವಲ್ ಮೂಲಕ ಉತ್ತಮ ಉದಾಹರಣೆಗಳೊಂದಿಗೆ ಕಲಿಯಲು ಸಾಧ್ಯವಾಗಲಿದೆ ಎಂದು ರಾಜ್ಯ ಶಿಕ್ಷಾ ಕೇಂದ್ರದ ಕಮಿಷನರ್ ದೀಪ್ತಿ ಗೌರ್ ಮುಖರ್ಜಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಮಾದರಿ ಪತ್ರಿಕೆಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ವಿವಿಧ ವಿಷಯಗಳ ಮೇಲೆ ಅಣಕು ಪರೀಕ್ಷೆ (mock test ) ತೆಗೆದುಕೊಳ್ಳಬಹುದು.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಭಾಗವಾಗಿ ಸಿಬಿಎಸ್ಸಿ ಕೇಂದ್ರ ಕೂಡ ’e-cbse’ ಆಪ್ನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾದ ’ePathshala NCERT’ ಹಲವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.