ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರೆಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸುವುದಾಗಿ ಕೇರಳ ಸರ್ಕಾರ ಹೇಳಿದೆ.
ಮಹಿಳೆಯರ ಪ್ರವೇಶ ನಿಷೇಧವನ್ನು ಸುಪ್ರೀಂ ಪ್ರಶ್ನಿಸಿದ ಮರುದಿನ ಕೇರಳ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಹಿಳೆಯರ ನಿಷೇಧವನ್ನು ಯಾಕೆ ಮುಂದುವರೆಸಬೇಕೆಂಬ ಬಗ್ಗೆ ವಿವರಿಸಿ ಅಫಿಡವಿಟ್ ಸಲ್ಲಿಸುವುದಾಗಿ ಅಲ್ಲಿನ ಗೃಹಸಚಿವ ರಮೇಶ್ ಚೆನ್ನಿತಾಲ ತಿಳಿಸಿದ್ದಾರೆ.
‘ನಂಬಿಕೆಗಳನ್ನೊಳಗೊಂಡ ಪದ್ಧತಿ, ಸಂಪ್ರದಾಯಗಳಂತೆ ದೇಗುಲಗಳು ನಡೆಯುತ್ತವೆ. ಹಾಗೆಯೇ ಶಬರಿಮಲೆಯಲ್ಲೂ ಕೆಲವೊಂದು ಪದ್ಧತಿಯಿದೆ. ಅದನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇವುಗಳನ್ನು ಏಕಾಏಕಿ ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಭಕ್ತರ ಭಾವನೆಗಳಿಗೆ ಗೌರವ ಕೊಡಬೇಕಾಗುತ್ತದೆ’ ಎಂದು ಚೆನ್ನಿತಾಲ ಹೇಳಿದ್ದಾರೆ.
ಶಬರಿಮಲೆ ದೇಗುಲವನ್ನು ನಡೆಸುತ್ತಿರುವ ತಿರುವಾಂಕೂರ್ ದೇವಸ್ವಾಮ್ ಬೋರ್ಡ್ ಕೂಡ, 10 ರಿಂದ 5೦ ವರ್ಷದ ನಡುವಣ ಮಹಿಳೆಯರಿಗೆ ನಿಷೇಧವನ್ನು ಮುಂದುವರೆಸುವಂತೆ ಕೋರಿ ಸುಪ್ರೀಂನಲ್ಲಿ ತಮ್ಮ ವಾದ ಮಂಡಿಸುವುದಾಗಿ ಹೇಳಿದೆ.
ಸೋಮವಾರ ಯುವ ವಕೀಲರ ಅಸೋಸಿಯೇಶನ್ ಸಲ್ಲಿಸಿದ್ದ ಪಿಟಿಷನ್ನನ್ನು ಪರಿಶೀಲನೆ ನಡೆಸಿದ ಸುಪ್ರೀಂ, ಮಹಿಳೆಯರಿಗೆ ನಿಷೇಧ ಪದ್ಧತಿ ಸಾಂವಿಧಾನಿಕವಾದುದು ಅಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.