ನವದೆಹಲಿ: ಪಠಾನ್ಕೋಟ್ ದಾಳಿಯ ಬಗ್ಗೆ ಭಾರತ ಸಲ್ಲಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಪಾಕಿಸ್ಥಾನ ಶೀಘ್ರ ಸ್ಪಂದನೆಯನ್ನು ತೋರಿಸುತ್ತಿದೆ. ಇದು ಅಲ್ಲಿನ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್ನನ್ನು ಅವಕ್ಕಾಗುವಂತೆ ಮಾಡಿದೆ.
ಪಾಕಿಸ್ಥಾನಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿರುವ ಆತ, ಪಠಾನ್ಕೋಟ್ ವಿಷಯದಲ್ಲಿ ಭಾರತ ಓವರ್ ರಿಯಾಕ್ಟಿಂಗ್ ಮಾಡುತ್ತಿದೆ ಎಂದು ಹೇಳಿದ್ದು ಮಾತ್ರವಲ್ಲದೇ, ಅಂತಹ ದಾಳಿಗಳು ಭವಿಷ್ಯದಲ್ಲಿ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.
‘ಭಯೋತ್ಪಾದನೆ ಭಾರತ ಮತ್ತು ಪಾಕಿಸ್ಥಾನ ಎರಡರಲ್ಲೂ ಇದೆ. ನಾವು ಕೂಡ ಸಂತ್ರಸ್ಥರೇ. ಹಾಗಾಗಿ ಪಠಾನ್ಕೋಟ್ ದಾಳಿಯ ಬಗ್ಗೆ ಓವರ್ ರಿಯಾಕ್ಟ್ ಮಾಡಬಾರದು. ಇಂತಹ ದಾಳಿಗಳ ಬಗ್ಗೆ ಕ್ರಮಕೈಗೊಳ್ಳಬೇಕೇ ಹೊರತು ಹೈಪರ್ ಆಗಬಾರದು’ ಎಂದಿದ್ದಾರೆ.
ನಮ್ಮ ಮೇಲೆ ಭಾರತ ಒತ್ತಡವನ್ನು ಹೇರಬಾರದು, ನಮ್ಮದು ಪುಟ್ಟ ರಾಷ್ಟ್ರವಾಗಿರಬಹುದು ಆದರೆ ನಮಗೆ ನಮ್ಮದೇ ಆದ ಘನತೆ ಇದೆ. ಭಾರತ ಉಗ್ರವಾದವನ್ನು ಸದಾ ಒನ್ ಸೈಡೆಡ್ ವಿಷಯವಾಗಿ ನೋಡುತ್ತದೆ, ಇದು ನನಗೆ ಬೇಸರ ತರಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.