ಹೊಶಂಗಾಬಾದ್: ತನ್ನ ತೋಟದ ನೀರಾವರಿಗೆ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇವಲ 8ನೇ ತರಗತಿ ಕಲಿತಿರುವ ರೈತ ಅಣೆಕಟ್ಟು ಹಾಗೂ ಟರ್ಬೈನ್ (ಹಬೆಯಂತ್ರ) ನಿರ್ಮಿಸಿದ್ದಾನೆ.
ಮಧ್ಯಪ್ರದೇಶದ ಹೊಶಂಗಾಬಾದ್ನ ಮದನ್ ಲಾಲ್ ತನ್ನ 10 ಎಕರೆ ಜಮೀನಿನ ನೀರಾವರಿಗೆ ನೀರಿನ ಕೊರತೆಯಿಂದ ಸಮಸ್ಯೆ ಎದುರಿಸಿದ್ದಾನೆ. ತಾವಾ ಅಣೆಕಟ್ಟಿಗೆ ಭೇಟಿ ನೀಡಿದ ವೇಳೆ ತನ್ನ ತೋಟದ ನೀರಾವರಿಗೂ ಅಣೆಕಟ್ಟು ನಿರ್ಮಿಸುವ ಹೊಸ ಯೋಜನೆ ರೂಪಿಸಿ ಅಣೆಕಟ್ಟು ನಿರ್ಮಿಸಿ ಟರ್ಬೈನ್ ಅಳವಡಿಸಿದ್ದಾನೆ.
ಜಮೀನು ಪ್ರದೇಶದಲ್ಲಿ ನಿರಂತರ ನೀರಿನ ಹರಿಯುವಿಕೆಯಿಂದ ಟರ್ಬೈನ್ ನಿರ್ಮಾಣಕ್ಕೆ ತೊಂದರೆ ಉಂಟಾಗಿದ್ದು, ಮರಳು, ಜಲ್ಲಿ, ಕಬ್ಬಿಣ ಹಾಗೂ ಸಿಮೆಂಟ್ನ ಸಹಾಯದಿಂದ ಭದ್ರ ಅಡಿಪಾಯ ನಿರ್ಮಿಸಿ ಟರ್ಬೈನ್ ಅಳವಡಿಸಲಾಗಿದೆ. ಅಣೆಕಟ್ಟಿನ ಒಳಭಾಗದಲ್ಲಿ ಟರ್ಬೈನ್ ನಿರ್ಮಿಸಲಾಗಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ತೋಟಕ್ಕೆ ನೀರು ಬಿಡಲಾಗುತ್ತಿದೆ. ಈವರೆಗೆ 10 ಎಕರೆ ಜಮೀನಿಗೆ ನೀರು ಬಿಡಲು 25 ದಿನ ಸಮಯ ತೆಗೆದೊಕೊಳ್ಳುತ್ತಿದ್ದು, ಈಗ ಕೇವಲ ನಾಲ್ಕು ದಿನಗಳಲ್ಲಿಯೇ ತೋಟಕ್ಕೆ ನೀರು ಸಿಂಪಡಿಸಬಹುದು ಎಂದು ಮದನ್ ಲಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.