ನವದೆಹಲಿ: ವಿದೇಶಾಂಗ ಸಚಿವಾಲಯದಲ್ಲಿ ಇಂಗ್ಲಿಷ್ ಬದಲು ಹಿಂದಿ ’ಪ್ರಾಬಲ್ಯ’ ಸ್ಥಾಪಿಸಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಹಿಂದಿ ಭಾಷೆಯನ್ನು ಪ್ರಚಾರಪಡಿಸುವುದು ಮಾತ್ರ ಒಂದು ಸಂಸ್ಥೆಯ ಕಾರ್ಯವಲ್ಲ, ಅದನ್ನು ಅಳವಡಿಸುವುಸುದು ಕೂಡ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಹಿಂದಿ ಭಾಷೆಯನ್ನು ಅನೇಕ ವರ್ಷಗಳಿಂದ ನಿರ್ಲಕ್ಷ ಮಾಡಲಾಡಲಾಗುತ್ತಿದ್ದು, ಹಿಂದಿ ಭಾಷೆ ತಕ್ಕ ಸ್ಥಾನಮಾನ, ಗೌರವ ಪಡೆಯುವ ಕುರಿತು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದ್ದಾರೆ.
ಜ.10ರಂದು ನಡೆದ ’ವಿಶ್ವ ಹಿಂದಿ ದಿವಸ್’ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಅವರು ಇಂಗ್ಲಿಷ್ ಏಕಸ್ವಾಮ್ಯನ್ನು ಮುರಿಯಬೇಕು. ಭವಿಷ್ಯದಲ್ಲಿ ವಿದೆಶಾಂಗ ಸಚಿವಾಲಯದಲ್ಲಿ ಇಂಗ್ಲಿಷ್ ಮೇಲೆ ಹಿಂದಿ ಸಾರ್ವಭೌಮತ್ವ ಪಡೆಯುವುದನ್ನು ಕಾಣಲು ಬಯಸುತ್ತೇನೆ. ಕಳೆದ 2006ರಿಂದ ವಿಶ್ವ ಹಿಂದಿ ದಿವಸ್ ಆಚರಿಸಲಾಗುತ್ತಿದ್ದು, 2014ರ ವರೆಗೆ ವಿದೇಶಾಂಗ ಸಚಿವಾಲಯದಲ್ಲಿ ಹಿಂದಿ ಮಾತನಾಡಲು ಅಥವಾ ಬರೆಯಲು ಬಳಸಿಲ್ಲಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.