ನೆಲ್ಲೋರ್: 20 ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ ವಿವಾದದ ಕಾವು ಇನ್ನೂ ಜೀವಂತವಾಗಿರುವಂತೆಯೇ ಸೋಮವಾರ ಆಂಧ್ರಪ್ರದೇಶ ಪೊಲೀಸರು ಅದೇ ಗುಂಪಿಗೆ ಸೇರಿದವರು ಎನ್ನಲಾದ 63 ತಮಿಳುನಾಡು ಮೂಲದ ಕಳ್ಳಸಾಗಾಣೆದಾರರನ್ನು ಬಂಧಿಸಿದ್ದಾರೆ.
ಆಂಧ್ರದ ನೆಲ್ಲೋರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಕಳ್ಳಸಾಗಾಣೆ ಮಾಡುತ್ತಿದ್ದ ವೇಳೆ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಬಲಿಯಿದ್ದ ಸುಮಾರು 2 ಕೋಟಿ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ತಮಿಳುನಾಡು ಮೂಲದವರು ಎಂದು ಹೇಳಲಾಗಿದೆ. ಕಳೆದ ವಾರ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಕಳ್ಳಸಾಗಾಣೆದಾರರ ಗುಂಪಿಗೆಯೇ ಇವರು ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದೆಡೆ ಎನ್ಕೌಂಟರ್ ಖಂಡಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ಭಾನುವಾರ ಚೆನ್ನೈನ ಹೆರಿಟೇಜ್ ಮಾರ್ಕೆಟ್ ಮೇಲೆ ಪೆಟ್ರೋಲ್ ಬಾಂಬ್ ಹಾಕಲಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.