ನ್ಯೂಯಾರ್ಕ್: ಮುಂಜಾನೆ ಎದ್ದು ಜಾಗಿಂಗ್ (ಓಡಲು) ಮಾಡಲು ಬಯಸಿದವರಿಗೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಹೊಸ ಸ್ಫೂರ್ತಿ ನೀಡಲಿದ್ದಾರೆ. 47 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಝುಕರ್ಬರ್ಗ್ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ’ರನ್’ ಎಂಬ ಹೊಸ ಸವಾಲನ್ನು ಘೋಷಿಸಿದ್ದಾರೆ.
ಈ ಹೊಸ ವರ್ಷ 2016ರಲ್ಲಿ ನಾನು ಹೊಸ ದೈಹಿಕ ಸವಾಲನ್ನು ಹೊಂದಿದ್ದೇನೆ. ನಾನು ಈ ವರ್ಷ 587 ಕಿ.ಮೀ. ಓಡಲಿದ್ದೇನೆ. ನನ್ನ ಈ ಕಾರ್ಯದಲ್ಲಿ ಅನೇಕ ಜನರು ಸಾಧ್ಯವಾದಷ್ಟು ಮಟ್ಟದಲ್ಲಿ ಸೇರಲು ಇಷ್ಟಪಡುತ್ತೇನೆ ಎಂದು ಅವರು ತಮ್ಮ ಬ್ಲಾಗ್ನಲ್ಲಿ ಪ್ರಕಟಿಸಿದ್ದಾರೆ. ಕಳೆದ ವರ್ಷ ಅವರು ತಮ್ಮ ಫೇಸ್ಬುಕ್ ಸಮುದಾಯದ ಜನರೊಂದಿಗೆ ’A Year of Books’ನ ಅನುಭವವನ್ನು ಹಂಚಿಕೊಂಡಿದ್ದರು.
ಈ ವರ್ಷದ ’A Year of Running’ ಅನುಭವವನ್ನು ಜನರೊಂದಿಗೆ ಸಾರ್ವಜನಿಕವಾಗಿ ಹಂಚಿಕೊಳ್ಳಲಿದ್ದಾರೆ. ಇದರ ಬಗ್ಗೆ ಜನರು ಚರ್ಚಿಸಿ, ’A Year of Running’ ಗ್ರೂಪ್ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ಗುಂಪಿನಲ್ಲಿ ಈಗಾಗಲೇ 43,000 ಸದಸ್ಯರು ಇದ್ದಾರೆ ಎಂದು ಝುಕರ್ಬರ್ಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.