ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝ್ಗರ್ನ ಸಹೋದರ ಅಬ್ದುಲ್ ರಾಫ್ ಅಝ್ಗರ್ ಪಠಾನ್ಕೋಟ್ ವಾಯುನೆಲೆಯ ಮೇಲಿನ ಮಾಸ್ಟರ್ ಮೈಂಡ್ ಎಂದು ವರದಿಗಳು ತಿಳಿಸಿವೆ.
ಮೌಲಾನಾ ಮಸೂದ್ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಈ ಸಂಘಟನೆ ಪಠಾನ್ಕೋಟ್ ಮೇಲೆ ದಾಳಿ ನಡೆಸಿತ್ತು, ಈ ದಾಳಿಯ ರೂಪುರೇಶೆಗಳನ್ನು ಸಿದ್ಧಪಡಿಸಿದ್ದು ಅಬ್ದುಲ್ ರಾಫ್ ಎಂದು ಮೂಲಗಳು ತಿಳಿಸಿವೆ. ಈತ ಜೈಶೇಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಪಠಾನ್ಕೋಟ್ ದಾಳಿಕೋರರು ಪಾಕಿಸ್ಥಾನದಿಂದ ಭಾರತಕ್ಕೆ ಅಕ್ರಮವಾಗಿ ಒಳನುಸುಳಿದವರು, ಕಂದಹಾರ್ ಹೈಜಾಕ್ನಲ್ಲಿ ಭಾಗಿಯಾದವರೂ ಇದರಲ್ಲಿ ಇರಬಹುದು ಎಂಬ ಅನುಮಾನಗಳಿವೆ. ಮೌಲಾನಾ ಮಸೂದ್ ನೇತೃತ್ವದಲ್ಲಿ ಕಂದಹಾರ್ ವಿಮಾನ ಹೈಜಾಕ್ ಮಾಡಲಾಗಿತ್ತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಶೇ-ಇ-ಮೊಹಮ್ಮದ್ ಸಕ್ರಿಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.