ಬೆಂಗಳೂರು: ನಂದಿನಿ ಪ್ರತಿ ಲೀಟರ್ ಹಾಲಿಗೆ 4 ರೂ., ಪ್ರತಿ ಕೆ.ಜಿ. ಮೊಸರಿಗೆ 2 ರೂ. ಹೆಚ್ಚಳ ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.
ಕೆಎಂಎಫ್ನ ಎಲ್ಲ 15 ಒಕ್ಕೂಟಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದ್ದು, ಟೋನ್ಡ್ ಹಾಲಿನ ಸದ್ಯದ ದರ 29 ರೂ. ನಿಂದ 33 ರೂ. ಆಗಲಿದೆ.
ಸದ್ಯಕ್ಕೆ ಪ್ಯಾಕೆಟ್ ಮೇಲಿನ ದರವು ಹಳೇ ದರದಲ್ಲೇ ಇರಲಿದ್ದು, ಪ್ಯಾಕಿಂಗ್ ದಾಸ್ತಾನು ಮುಗಿದ ಬಳಿಕ ಹೊಸ ದರ ಮುದ್ರಣಗೊಂಡು ಮಾರಾಟವಾಗಲಿದೆ ಎನ್ನಲಾಗಿದೆ. ಇನ್ನಿತರ ನಂದಿನಿ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ಹೇಳಿದೆ.
ದರ ಏರಿಕೆಯಿಂದ ರೈತರಿಗೆ ಎಷ್ಟು ಮೊತ್ತ ನೀಡಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಒಕ್ಕೂಟಗಳು ಸಭೆ ನಡೆಸಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಹಾಲು ಮತ್ತು ಮೊಸರಿನ ದರ ಏರಿಕೆ ಕುರಿತು ಬಹುತೇಕ ಜನರಲ್ಲಿ ಅಸಮಾಧಾನ ಮೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.