ನವದೆಹಲಿ: ಮೊಬೈಲ್ ಸಾಧನಗಳ ಬಳಕೆಯಿಂದ ಅಂತರ್ಜಾಲ ಸಂಪರ್ಕ ಹೊಂದುವವರ ಸಂಖ್ಯೆ 2016ರಲ್ಲಿ 2 ಬಿಲಿಯನ್ ದಾಟಲಿದ್ದು, ಭಾರತ, ಚೀನಾ, ಇಂಡೋನೇಷ್ಯಾ ರಾಷ್ಟ್ರಗಳು ಮುಂಚೂಣಿಯಲ್ಲಿವೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ಹೇಳಿದೆ.
ಒಟ್ಟಾರೆ ಅಂದಾಜು ೩.೨ ಬಿಲಿಯನ್ (ವಿಶ್ವಾದ್ಯಂತ ಶೇ.44) ಜನರು ೨೦೧೬ರಲ್ಲಿ ಅಂತರ್ಜಾಲ ಬಳಕೆಗೆ ಪ್ರವೇಶ ಹೊಂದಲಿದ್ದರೆ ಎಂದು ಅದು ತಿಳಿಸಿದೆ.
ಜಗತ್ತಿನಾದ್ಯಂತ ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಭಾರತ, ಚೀನಾ ರಾಷ್ಟ್ರಗಳಲ್ಲಿ ಅತಿ ವೇಗದ ಬೆಳವಣಿಗೆ ಹೊಂದಿದೆ. ಕಡಿಮೆ ವೆಚ್ಚದ ಮೊಬೈಲ್ ಸಾಧನಗಳು ಮತ್ತು ಅಗ್ಗದ ದರದಲ್ಲಿ ದೊರೆಯುವ ವೈರ್ಲೆಸ್ ನೆಟವರ್ಕ್ಗಳು ದೇಶದಲ್ಲಿ ಅತರ್ಜಾಲ ಸಂಯೋಜನೆ ಸುಲಭಗೊಳಿಸಿದೆ ಎಂದು ಹೇಳಿದೆ.
ಹೊಸ ವಿಧಾನ ಮತ್ತು ತಂತ್ರಾಂಶಗಳು ಪರಿಚಯಿಸಿದಲ್ಲಿ 2020ರ ವರೆಗೆ ಜಾಗತಿಕವಾಗಿ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆ ವಾರ್ಷಿಕ ಶೇ.೨ರಂತೆ ಏರಿಕೆ ಕಾಣಲಿದೆ. ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಅಸೋಸಿಯೇಶನ್ ಡಿ.2015ರ ವೇಳೆಗೆ 402 ಮಿಲಿಯನ್ ಭಾರತೀಯರು ಅಂತರ್ಜಾಲ ಹೊಂದಬಹುದೆಂದು ಅಂದಾಜಿಸಿತ್ತು. ೨೦೧೪ಕ್ಕೆ ಹೋಲಿಸಿದರೆ ಶೇ.49ರಷ್ಟು ಏರಿಕೆ ಕಂಡಿದ್ದು, 306ರಷ್ಟು ಮಂದಿ ಮೊಬೈಲ್ ಅಂತರ್ಜಾಲ ಹೊಂದುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮುಂದಿನ 5 ವರ್ಷಗಳಲ್ಲಿ ಮೊಬೈಲ್ ಅಂತರ್ಜಾಲ ಬಳಕೆದಾರರ ಸಂಖ್ಯೆ ಜಾಗತಿಕವಾಗಿ ಶೇ.25ರಷ್ಟು ಏರಿಕೆಯಾಗಲಿದೆ ಎಂದು ಐಡಿಸಿ ಅಂದಾಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.