ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಹಲವು ಸಾಮ್ಯತೆಗಳಿವೆ. ಈ ಇಬ್ಬರೂ ಸ್ವಯಂ ನಿರ್ಮಿತ ನಾಯಕರು ಮತ್ತು ಪ್ರಬಲ ವಾಗ್ಮಿಗಳು. ಭಾರತೀಯ ರಾಜಕಾರಣದಲ್ಲಿ ಹಲವು ಕಠಿಣ ಸತ್ಯಗಳು ಎದುರಾದಾಗ ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಇಬ್ಬರು ನಾಯಕರು ಹೊಂದಿದ್ದಾರೆ. ಆದರೆ ರಾಜಕೀಯದಲ್ಲಿ ಇಬ್ಬರೂ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಇದ್ದಂತೆ.
ಪ್ರಧಾನಿ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅ.2, 2014ರ ಗಾಂಧಿ ಜಯಂತಿಯಂದು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಕೂಡ ಒಂದು. ಆದರೆ ಮಾಧ್ಯಮಗಳು ಪ್ರಚಾರ ಮಾಡಿದಂತೆ ದೇಶದ ಎಲ್ಲಾ ನಗರಗಳಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಪ್ರಭಾವ ಬೀರಿಲ್ಲ. ಇದಕ್ಕೆ ಇನ್ನಷ್ಟು ಶ್ರಮ ಅಗತ್ಯವಿದೆ. ಪ್ರಧಾನ ಮಂತ್ರಿ ಜನ-ಧನ ಯೋಜನೆ ಕೂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಅದರಂತೆ ದೆಹಲಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು ಮತ್ತು ರಸ್ತೆಗಳಲ್ಲಿ ವಾಹನ ಮತ್ತು ಜನನಿಬಿಡತೆಯನ್ನು ನಿವಾರಿಸಲು ಮುಖ್ಯಮಮತ್ರಿ ಅರವಿಂದ್ ಕೇಜ್ರಿವಾಲ್ ಸಮ-ಬೆಸ ನಿಯಮ ಜಾರಿಗೆ ತಂದಿದ್ದಾರೆ.
ಹೊಸ ವರ್ಷವಾದ ಜ.1ರಂದು ಈ ಸೂತ್ರವನ್ನು ಜಾರಿಗೊಳಿಸಲಾಗಿದ್ದು, ಕೇಜ್ರವಾಲ್ ಅವರು ತಮ್ಮ ಭ್ರಮೆಯಲ್ಲಿ ದೆಹಲಿ ನಿವಾಸಿಗಳು ಸಮ-ಬೆಸ ಸೂತ್ರವನ್ನು ಸ್ವೀಕರಿಸಿದ್ದಾರೆ, ಇದೊಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. ಆದರೆ ಜ.೧ರಂದು ಶೇ.25ರಷ್ಟು ನಿವಾಸಿಗಳೂ ರಸ್ತೆಗಿಳಿದಿಲ್ಲ. ಹೊಸ ವರ್ಷಾಚರಣೆಯ ಸಂದರ್ಭ ಎದುರಾಗಬಹುದಾದ ಸಮಸ್ಯೆಗಳಿಂದಾಗಿ ದೆಹಲಿ ಬಿಟ್ಟು ಇತರ ನಗರಗಳಿಗೆ ತೆರಳಿದ್ದಾರೆ.
ದೆಹಲಿಯ ಲಕ್ಷಾಂತರ ನಿವಾಸಿಗಳು ಹೊಸ ವರ್ಷ ಆಚರಣೆ ಬಳಿಕ ಮುಂದಿನ ಸೋಮವಾರದಂದು ಎಂದಿನಂತೆ ತಮ್ಮ ಕಾಲೇಜು, ಕಚೇರಿಗಳಿಗೆ ತೆರಳಲಿದ್ದಾರೆ. ಈ ಸೂತ್ರದ ನಿಜವಾದ ಪರೀಕ್ಷೆ ಅಂದು ಗೋಚರವಾಗಲಿದೆ.
ದೆಹಲಿ ಜಗತ್ತಿನಲ್ಲೇ ಅತ್ಯಧಿಕ ವಾಯು ಮಾಲಿನ್ಯ ಹೊಂದಿದ ನಗರವಾಗಿದೆ. ಸಮ-ಬೆಸ ನಿಯಮಗಳಂತಹ ಉಪಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ಮತ್ತು ನಿರ್ವಹಣೆ ಅಗತ್ಯವಿದೆ. ಕೇಂದ್ರ ಸರ್ಕಾರದ ’ಕ್ಲೀನ್ ಇಂಡಿಯಾ’ ಯೋಜನೆಯಿಂದ ಕೇಜ್ರಿವಾಲ್ ಕಲಿಯಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.