ನವದೆಹಲಿ: ಬಳಕೆದಾರರ ಸೊಬಗನ್ನು ಹೆಚ್ಚಿಸುವ ಹೊಸ ವಿನ್ಯಾಸದ ಸೆಲ್ಫಿ ಆಪ್ನ್ನು ಮೈಕ್ರೋಸಾಫ್ಟ್ ಬಿಡುಗಡೆಗೊಳಿಸಿದೆ. Xiaomi ಸ್ಮಾರ್ಟ್ಫೋನ್ನ ’ಬ್ಯೂಟಿ 5 ಕ್ಯಾಮ್’ ಆಪ್ಷನ್ಗೆ ಹೋಲುವ ಈ ಸೆಲ್ಫಿ ಆಪ್ ಐಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಮೈಕ್ರೋಸಾಫ್ಟ್ನ ಈ ಆಪ್ ಸೆಲ್ಫಿಗಳಿಗೆ ಅಗತ್ಯ ಬೆಳಕನ್ನು ಹೊಂದಿಸಿ, ಮುಖದ ನೈಜತೆಯನ್ನು ಸುಂದರ ಮತ್ತು ಮೃದುಗೊಳಿಸುವಲ್ಲಿ ಸಹಕರಿಸುತ್ತದೆ. ಈ ವೇಳೆ ವಯಸ್ಸು, ಲಿಂಗ, ಚರ್ಮದ ಟೋನ್ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಬಳಕೆದಾರರು ಆನ್ ಸ್ಕ್ರೀನ್ ಸ್ಲೈಡರ್ ಬಳಸಿ ಚಿತ್ರಗಳನ್ನು ಸುಧಾರಿಸಬಹುದು ಎಂದು ಮೈಕೋಸಾಫ್ಟ್ ತಿಳಿಸಿದೆ.
ಕಲರ್ ಥೀಮ್ ಬದಲಾವಣೆ, ಶಬ್ದ ಕಡಿಮೆಗೊಳಿಸುವುದು, ಆಟೋಮ್ಯಾಟಿಕ್ ಎಕ್ಸ್ಪೋಷರ್ ಈ ಅಪ್ಲಿಕೇಶನ್ನ ಪ್ರಮುಖ ಲಕ್ಷಣಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.