ನವದೆಹಲಿ: ಕೊನೆಗೂ ಸಂಸತ್ತು ಕ್ಯಾಂಟೀನ್ನಲ್ಲಿ ಆಹಾರಗಳನ್ನು ಸಬ್ಸಿಡಿಯಾಗಿ ನೀಡುವ ದಶಕಗಳ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗಿದೆ.
ನಾಳೆಯಿಂದ ಆಹಾರಗಳನ್ನು ನೋ-ಪ್ರೋಫಿಟ್, ನೋ-ಲಾಸ್ ಮೇಲೆ ಮಾರಾಟ ಮಾಡಲಾಗುತ್ತದೆ ಎಂದು ಲೋಕಸಭಾದ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಇದರಿಂದಾಗಿವರ್ಷಕ್ಕೆ ಉಂಟಾಗುತ್ತಿದ್ದ ರೂ.16 ಕೋಟಿ ನಷ್ಟವನ್ನು ತಡೆಗಟ್ಟಬಹುದಾಗಿದೆ.
ಹೊಸ ಮೆನುವಿನ ಪ್ರಕಾರ, ಈ ಹಿಂದೆ 18 ರೂಪಾಯಿಗೆ ಮಾರಲಾಗುತ್ತಿದ್ದ ವೆಜಿಟೇರಿಯನ್ ಥಾಲಿಯನ್ನು ಇನ್ನು ಮುಂದೆ 30.ರೂಗೆ ಮಾರಲಾಗುತ್ತದೆ, ನಾನ್-ವೆಜ್ ಥಾಲಿ 33.ರೂ ಬದಲಿಗೆ 60.ರೂಗೆ ಮಾರಲಾಗುತ್ತದೆ.
೨೯ ರೂಗೆ ಮಾರಾಟವಾಗುತ್ತಿದ್ದ ಚಿಕನ್ ಕರಿ ಇನ್ನು ಮುಂದೆ 40.ರೂ ತಗುಲಲಿದೆ. 61.ರೂಗೆ ಸಿಗುತ್ತಿದ್ದ ತ್ರೀ ಕೋರ್ಸ್ ಮೀಲ್ಸ್ಗೆ ಇನ್ನು ಮುಂದೆ 90.ರೂ ಕೊಡಬೇಕಾಗಿದೆ. ಸಂಸತ್ತು ಸದಸ್ಯರು, ಮಾಧ್ಯಮ ಸಿಬ್ಬಂದಿಗಳು, ವಿಸಿಟರ್ಗಳು ಹೀಗೆ ಎಲ್ಲರಿಗೂ ಈ ದರ ಅನ್ವಯವಾಗಲಿದೆ.
ಕೊನೆಯ ಬಾರಿಗೆ 2010ರಲ್ಲಿ ಪಾರ್ಲಿಮೆಂಟ್ ಫುಡ್ಗಳ ದರವನ್ನು ಏರಿಕೆ ಮಾಡಲಾಗಿತ್ತು. ಇಂದಿನಿಂದ ಸಮಯ ಸಮಯಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಸತ್ತಿನಲ್ಲಿ ಸಬ್ಸಿಡಿ ದರದಲ್ಲಿ ರಾಜಕಾರಣಿಗಳಿಗೆ ಆಹಾರ ನೀಡುವುದಕ್ಕೆ ಭಾರೀ ಟೀಕೆಗಳು ಕೇಳಿ ಬರುತ್ತಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.