ನವದೆಹಲಿ: ಪಾಕಿಸ್ಥಾನದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಲೇ ಇದ್ದಾರೆ. ಇತ್ತೀಚಿಗಷ್ಟೇ ಲಾಹೋರ್ಗೆ ಭೇಟಿ ಕೊಟ್ಟು ನವಾಝ್ ಶರೀಫ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಆತ್ಮೀಯವಾಗಿ ಬೆರೆತಿದ್ದಾರೆ.
ಮೋದಿಯ ಪ್ರಯತ್ನಗಳು ಗಡಿಯಲ್ಲಿ ಸಕಾರಾತ್ಮ ಫಲಿತಾಂಶವನ್ನು ನೀಡುತ್ತಿದೆ, ಕಳೆದ 50 ದಿನಗಳಿಂದ ಪಾಕಿಸ್ಥಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿಲ್ಲ. ತಕ್ಕ ಮಟ್ಟಿನ ಶಾಂತಿ ಅಲ್ಲಿ ಪ್ರಸ್ತುತ ನೆಲೆಸಿದೆ. ಬಹುಶಃ ಇಷ್ಟು ದೀರ್ಘ ಸಮಯದವರೆಗೆ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸದೇ ಇರುವುದು ಇದೇ ಮೊದಲೆನಿಸುತ್ತದೆ.
ಕಳೆದ ಒಂದು ತಿಂಗಳಲ್ಲಿ ಮೋದಿ-ಶರೀಫ್ ಎರಡು ಬಾರಿ ಭೇಟಿ ಮಾಡಿ ಪರಸ್ಪರ ಕೈಕುಲುಕಿದ್ದಾರೆ. ಭಾರತ-ಪಾಕಿಸ್ಥಾನ ಮುಖಂಡರ ನಡುವೆಯೂ ಮಾತುಕತೆಗಳು ಏರ್ಪಟ್ಟಿದೆ. ಇದೇ ಕಾರಣದಿಂದಾಗಿ ಗಡಿ ಶಾಂತವಾಗಿದೆ ಎಂದೆನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.