ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ ದೇಶದ ಎಲ್ಲಾ ರಾಜಕಾರಣಿಗಳಿಂತಲೂ ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕಿಂತಲೂ ದೊಡ್ಡದು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದು ಬಂದಿದೆ.
ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ 10 ಜನ್ಪಥ್ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ನಿವಾಸ 7 ಆರ್ಸಿಆರ್ಗಿಂತಲೂ ದೊಡ್ಡದಾಗಿದೆ.
ಸೋನಿಯಾರ ನಿವಾಸ ಸುಮಾರು 15,181 square metre ವಿಸ್ತಾರದಲ್ಲಿದೆ, ಮೋದಿಯವರ ನಿವಾಸ 14,101 square metre ವಿಸ್ತಾರವನ್ನು ಹೊಂದಿದೆ.
ಸೋನಿಯಾರ ಮಗ ರಾಹುಲ್ ಗಾಂದಿಯವರಿಗೂ 12 ತುಘಲಕ್ ಲೇನ್ನಲ್ಲಿ ಬಂಗಲೆಯನ್ನು ನೀಡಲಾಗಿದ್ದು, ಇದರ ವಿಸ್ತಾರ 5,022.58 square metre.
ಸಂಸತ್ತು ಸದಸ್ಯೆಯಲ್ಲದ ಪ್ರಿಯಾಂಕ ವಾದ್ರಾರಿಗೂ ಲೋಧಿ ಎಸ್ಟೇಟ್ನಲ್ಲಿ ಬಂಗಲೆಯನ್ನು ನೀಡಲಾಗಿದೆ, ಇದರ ವಿಸ್ತಾರ 2,765.18 ಸ್ಕ್ಯಾರ್ ಮೀಟರ್.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ಅತೀ ಹೆಚ್ಚು ವಿಸ್ತಾರದ ಬಂಗಲೆಯನ್ನು ಹೊಂದಿದ್ದಾರೆ. ರಾಷ್ಟ್ರಪತಿಗಳ ಅಧಿಕೃತ ನಿವಾಸ ರಾಷ್ಟ್ರಪತಿ ಭವನ ೩೨೦ ಎಕರೆ ಪ್ರದೇಶ ಹೊಂದಿದೆ. ಉಪ ರಾಷ್ಟ್ರಪತಿಗಳ 6 ಮೌಲನಾ ಆಝಾದ್ ರೋಡ್ನಲ್ಲಿನ ಅಧಿಕೃತ ನಿವಾಸ 26,333,49ಸ್ಕ್ಯಾರ್ ಮೀಟರ್ ಹೊಂದಿದೆ.
ದೇವ್ ಆಶಿಶ್ ಭಟ್ಟಾಚಾರ್ಯ ಎಂಬುವವರು ಆರ್ಟಿಐ ಮೂಲಕ ಈ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.