ನವದೆಹಲಿ: 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನವು ಬುಧವಾರ ಕೊನೆಗೊಂಡಿದೆ. ಗದ್ದಲ, ಬಿಸಿ ಚರ್ಚೆ, ಆರೋಪ-ಪ್ರತ್ಯಾರೋಪ, ಕಲಾಪ ಮುಂದೂಡಿಕೆ, ಇಂತಹವುಗಳಲ್ಲೇ ಅಧಿವೇಶನ ಅಂತ್ಯ ಕಂಡಿತು.
20 ದಿನಗಳ ಕಾಲ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಲೋಕಸಭೆ ಒಟ್ಟು 13 ಮಸೂದೆಗಳನ್ನು ಜಾರಿ ಮಾಡಿದೆ. ರಾಜ್ಯಸಭೆಯು 9 ಮಸೂದೆಗಳನ್ನು ಅಂಗೀಕಾರ ಮಾಡಿದೆ.
ಬಹು ವಿಶೇಷವೆಂದರೆ 16 ವರ್ಷ ಮೇಲ್ಪಟ್ಟವರು ಅಪರಾಧಗಳನ್ನು ಎಸಗಿದರೆ ಅವರನ್ನು ಹಿರಿಯರೆಂದೇ ಪರಿಗಣಿಸಿ ಆವರಿಗೆ ಶಿಕ್ಷೆಯನ್ನು ವಿಧಿಸುವ ಬಾಲಾಪರಾಧಿ ಮಸೂದೆಗೆ ಅಂಗೀಕಾರ ದೊರೆತಿದೆ. ಆದರೆ ದುರಾದೃಷ್ಟವೆಂದರೆ ಇಡೀ ದೇಶವೇ ಕಾಯುತ್ತಿದ್ದ ಜಿಎಸ್ಟಿ ಮಸೂದೆಗೆ ಅಂಗೀಕಾರ ದೊರೆಯಲಿಲ್ಲ.
ಅಸಹಿಷ್ಣುತೆ, ನ್ಯಾಷನಲ್ ಹೆರಾಲ್ಡ್ ಪ್ರಕರಣ, ಡಿಡಿಸಿಎ ಹಗರಣ, ದಲಿತರ ಅವಹೇಳನ ಮೊದಲಾದ ವಿಷಯಗಳು ಸಂಸತ್ ಅಧಿವೇಶನದಲ್ಲಿ ಬಹು ಚರ್ಚಿತವಾಗಿ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದವು.
ಉಭಯ ಸದನಗಳ ಕಲಾಪಕ್ಕೆ ಪ್ರತಿ ನಿಮಿಷಕ್ಕೆ ಸುಮಾರು 29 ಸಾವಿರ ವೆಚ್ಚವಾಗುತ್ತದೆ. ಗದ್ದಲಗಳ ಕಲಾಪದಿಂದಾಗಿ ಸುಮಾರು 9.9 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.