ಬ್ರೂನಿ: ಕ್ರಿಸ್ಮಸ್ ಹಬ್ಬಕ್ಕೆ ಇನ್ನೆನೂ ಎರಡೇ ದಿನ ಬಾಕಿ ಇದೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಸಂತಾಕ್ಲಾಸ್ಗಳು ಈಗಲೇ ಮನೆ ಮನೆಗೆ ತೆರಳಿ ಗಿಫ್ಟ್ಗಳನ್ನು ನೀಡುತ್ತಿವೆ.
ಆದರೆ ತೈಲ ಸಂಪತ್ತಿನಿಂದ ಕೂಡಿದ ಅರಬ್ ರಾಷ್ಟ್ರ ಬ್ರೂನಿಯಲ್ಲಿ ಮಾತ್ರ ಕ್ರಿಸ್ಮಸ್ನ್ನು ಸಾರ್ವಜನಿಕವಾಗಿ ಆಚರಿಸಿದರೆ ಜೈಗೆ ಹಾಕುತ್ತೇವೆ ಎಂದು ಅಲ್ಲಿನ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾನೆ.
ಬ್ರೂನಿಯ ಸುಲ್ತಾನ ಹಸ್ಸಾನಲ್ ಬೊಲ್ಕಿಹ ಸಾರ್ವಜನಿಕ ಕ್ರಿಸ್ಮಸ್ ಆಚರಣೆಯನ್ನು ನಿಷೇಧಿಸಿದ್ದಾನೆ, ಇಸ್ಲಾಂ ನಂಬಿಕೆಗಳ ಮೇಲೆ ಇದು ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ.
ಸಾರ್ವಜನಿಕ ಸಂಭ್ರಮಿಸುವುದು, ಸಂತಾಕ್ಲೋಸ್ ಟೋಪಿ ಹಾಕುವುದು, ಕರೋಲ್ಗಳನ್ನು ಹಾಡುವುದನ್ನು ನಿರ್ಬಂಧಿಸಲಾಗಿದೆ, ಮುಸ್ಲಿಂ ಕ್ರಿಸ್ಮಸ್ ಆಚರಿಸಿದರೆ ಅವರನ್ನು ಐದು ವರ್ಷ ಜೈಲಿಗೆ ಹಾಕಲಾಗುತ್ತದೆ ಮತ್ತು 20 ಸಾವಿರ ಡಾಲರ್ ದಂಡ ವಿಧಿಸಲಾಗುತ್ತದೆ.
ಇಲ್ಲಿ ಶೇ.32ರಷ್ಟಿರುವ ಕ್ರಿಶ್ಚಿಯನ್ನರು ಖಾಸಗಿಯಾಗಿ ಮಾತ್ರ ಕ್ರಿಸ್ಮಸ್ ಆಚರಿಸಬೇಕು ಎಂದು ತಾಕೀತು ಮಾಡಲಾಗಿದೆ. ಆದರೆ ಆ ದೇಶದ ಬಹುತೇಕರು ಸುಲ್ತಾನನ ಈ ಕ್ರಮವನ್ನು ವಿರೋಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.