ನವದೆಹಲಿ: ಕೊನೆಗೂ ರಾಜ್ಯ ಸಭೆಯಲ್ಲಿ ಬಾಲಾಪರಾಧಿ ನ್ಯಾಯ ಮಸೂದೆ ಅಂಗೀಕಾರಗೊಂಡಿದೆ. ಧ್ವನಿ ಮತದ ಮೂಲಕ ಸದಸ್ಯರು ಈ ಮಸೂದೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದವರೆಗಿನ ಬಾಲಕರನ್ನು ವಯಸ್ಕರೆಂದು ಪರಿಗಣಿಸಿ ಅವರಿಗೆ ಶಿಕ್ಷೆಯನ್ನು ವಿಧಿಸುವ ಮಹತ್ವದ ಕಾಯ್ದೆ ಇದಾಗಿದೆ.
ಈಗಾಗಲೇ ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ, ಇದೀಗ ರಾಜ್ಯಸಭಾದಲ್ಲೂ ಅಂಗೀಕಾರವಾಗಿದ್ದು, ಇನ್ನು ಅಂತಿಮ ಮುದ್ರೆಗಾಗಿ ರಾಷ್ಟ್ರಪತಿಗಳ ಬಳಿ ಹೋಗಲಿದೆ.
ಎಡಪಕ್ಷಗಳು ಮಾತ್ರ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗ ಮಾಡಿ ಹೊರ ನಡೆದವು, ಆಯ್ಕೆ ಸಮಿತಿಗೆ ಈ ಮಸೂದೆಯನ್ನು ಕಳುಹಿಸಬೇಕೆಂಬುದು ಇವರ ಒತ್ತಾಯವಾಗಿತ್ತು.
ರಾಜ್ಯಸಭೆಯಲ್ಲಿ ನಡೆದ ಮಸೂದೆಯ ಬಗೆಗಿನ ಚರ್ಚೆಯನ್ನು ದೆಹಲಿ ಗ್ಯಾಂಗ್ರೇಪ್ ಸಂತ್ರಸ್ಥೆ ನಿರ್ಭಯಾ ಪೋಷಕರು ಗ್ಯಾಲರಿಯಲ್ಲಿ ಕೂತು ವೀಕ್ಷಿಸಿದರು.
ಮಸೂದೆ ಅಂಗೀಕಾರಗೊಂಡ ಬಗ್ಗೆ ಸಂಸತಸ ವ್ಯಕ್ತಪಡಿಸಿದ ಇವರು, ‘ಈ ಮಸೂದೆಯಿಂದ ಹಲವಾರು ಹೆಣ್ಣುಮಕ್ಕಳಿಗೆ ನ್ಯಾಯ ದೊರಕಲಿದೆ ಎಂಬ ಸಂತಸವಿದೆ, ಆದರೆ ನಮ್ಮ ಮಗಳಿಗೆ ನ್ಯಾಯ ಸಿಕ್ಕಿಲ್ಲವಲ್ಲ ಎಂಬ ಬೇಸರವೂ ಇದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.