ನವದೆಹಲಿ: ರಾಷ್ಟ್ರಕವಿ ರವೀಂದ್ರ ನಾಥ ಟಾಗೋರ್ ಅವರು ಬರೆದಿರುವ ರಾಷ್ಟ್ರಗೀತೆ ‘ಜಣ ಗಣ ಮನ’ದ ಕೆಲವೊಂದು ಪದಗಳನ್ನು ಬದಲಾವಣೆ ಮಾಡುವಂತೆ ಕೋರಿ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಹಾಡುವಾಗ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಗೀತೆಯ ಕೆಲವೊಂದು ಪದಗಳನ್ನು ಬದಲಾವಣೆ ಮಾಡಿ ಸಂಸ್ಕೃತ ಪದಗಳನ್ನು ಸೇರಿಸಿದ್ದರು. ಬ್ರಿಟಿಷ್ ರಾಣಿಯನ್ನು ಹೊಗಳಿ ಬರೆದ ಶಬ್ದಗಳ ಬದಲಾಗಿ ಬೋಸ್ ಅವರು ಸಂಸ್ಕೃತ ಶಬ್ದಗಳನ್ನು ಅಳವಡಿಸಿದ್ದರು. ಇದೀಗ ಅವರ ರೀತಿಯೇ ಪದಗಳನ್ನು ಬದಲಾವಣೆ ಮಾಡಿ ಎಂದು ಸ್ವಾಮಿ ಮನವಿ ಮಾಡಿದ್ದಾರೆ.
ಡಾ. ರಾಜೇಂದ್ರ ಪ್ರಸಾದ್ ಅವರು ಭವಿಷ್ಯದಲ್ಲಿ ರಾಷ್ಟ್ರಗೀತೆಯ ಪದಗಳನ್ನು ಬದಲಾಯಿಸಬಹುದು ಎಂದು ಅಂದು ಸಂಸತ್ತಿನಲ್ಲಿ ತಿಳಿಸಿದ್ದರು. ಇದೀಗ ಶೇ.75ರಷ್ಟು ಪದಗಳನ್ನು ಹಾಗೆಯೇ ಬಿಟ್ಟು, ಶೇ.೫ರಷ್ಟು ಪದಗಳನ್ನು ಮಾತ್ರ ಬದಲಾಯಿಸುವ ಎಂದು ಸ್ವಾಮಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.