ನವದೆಹಲಿ: ದೇಶದ 18 ಲಕ್ಷ ಪೊಲೀಸರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಒಂದು ವಿಭಿನ್ನ ಪ್ರಯತ್ನವನ್ನು ನಡೆಸಿದ್ದು, ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಪೊಲೀಸರಿಗೂ ಅವರು ವೈಯಕ್ತಿಕವಾಗಿ ಎಸ್ಎಂಎಸ್ ರವಾನಿಸುವ ಸಾಧ್ಯತೆ ಇದೆ.
ಎಲ್ಲಾ ರಾಜ್ಯಗಳ ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್ರಿಂದ ಹಿಡಿದು ಕಾನ್ಸ್ಸ್ಟೇಬಲ್ವರೆಗೆ ಎಲ್ಲರನ್ನೂ ವೈಯಕ್ತಿಕವಾಗಿ ಸಂಪರ್ಕಿಸಿ ಅವರಿಗೆ ಎಸ್ಎಂಎಸ್ ಕಳುಹಿಸಿ ಗಣರಾಜ್ಯೋತ್ಸವದ ಶುಭಾಶಯ ಹೇಳಲಿದ್ದಾರೆ.
ಗುಜರಾತಿನ ರಣ್ನಲ್ಲಿ ನಡೆದ ಡಿಜಿಪಿಗಳ ಕಾನ್ಫರೆನ್ಸ್ನಲ್ಲಿ ಅವರು ತನ್ನ ಈ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಜನವರಿ 26ರರೊಳಗೆ ಪೊಲೀಸರ ಕಾಂಟ್ಯಾಕ್ಟ್ ಡೀಟೆಲ್ಸ್ ಇರುವ ಲಿಸ್ಟ್ಗಳನ್ನು ಸಿದ್ಧಪಡಿಸುವಂತೆ ಅವರು ಡಿಜಿಪಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ದೇಶದಾದ್ಯಂತ ಇರುವ ಪೊಲೀಸರಿಗೆ ಪ್ರಧಾನಿಯೊಬ್ಬರು ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.