ಬೆಂಗಳೂರು : ಮಕ್ಕಳ ರಕ್ಷಣೆ ಜತೆಗೆ ಪೋಷಕರ ನೆಮ್ಮದಿಗೆ ಒಂದು ತಾಂತ್ರಿಕ ಅಚ್ಚರಿ ಎದುರಾಗಿದೆ. ಅದುವೇ ಸ್ಪ್ಯಾಚ್ ವಾಚ್! ಆತ್ಮ ರಕ್ಷಕ ಕೈಗಡಿಯಾರ. ಹೌದು. ಮಕ್ಕಳಿಗೆ ಸಂಬಂಧಿಸಿದಂತೆ ಈಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಪೋಷಕರು ನಿದ್ದೆ ಕಳೆದುಕೊಂಡಿದ್ದಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ಅಮ್ಮಂದಿರಿಗಂತೂ ಸದಾ ಮಕ್ಕಳದ್ದೇ ಚಿಂತೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಿಸುವ ಮಹಾನ್ ಸಾಧನ ಆತ್ಮ ರಕ್ಷಕ ಕೈಗಡಿಯಾರ ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ಈ ತಂತ್ರಜ್ಞಾನವನ್ನು ಹಿರಿಯ ನಾಗರಿಕರ ಸುರಕ್ಷತೆಗೂ ಅನುಕೂಲವಾಗುವಂತೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಶ್ರುತಿ ಹೆಗಡೆ ಆರಂಭಿಸಿದ ಟ್ರೈಕೂಟೆಕ್ ಸಂಸ್ಥೆ ಈ ವಿನೂತನ ಮಾದರಿಯ ಸ್ಪ್ಯಾಚ್ ವಾಚ್ ಅನ್ನು ಆವಿಷ್ಕರಿಸಿದೆ.
ಮಗುವಿನ ಸುರಕ್ಷತೆಗೆ ‘ಸ್ಪ್ಯಾಚ್ ವಾಚ್’ ಎಂಬ ಸಂಗಾತಿ! : ಇದೊಂದು ಅಪರೂಪದ ಕೈಗಡಿಯಾರ. ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಮೊಬೈಲ್ ವಾಚ್ ಇದಾಗಿದ್ದು ಮುಂಗೈಯಲ್ಲಿ ಶಾಂತವಾಗಿ ಸಹಜ ವಾಚಿನಂತೆಯೇ ಇರುತ್ತದೆ. ಆದರೆ ಇದು ಮಾಡುವ ಕೆಲಸ ಮಾತ್ರ ಅದ್ಭುತ. ಮಕ್ಕಳ ಚಟುವಟಿಕೆಗೆ ಯಾವ ರೀತಿಯಿಂದಲೂ ಈ ವಾಚ್ ಅಡ್ಡಿಪಡಿಸುವುದಿಲ್ಲ. ಮಗುವಿನ ಆಟ, ಪಾಠವನ್ನೆಲ್ಲ ಸಹಜವಾಗಿಯೇ ಇರುವಂತೆ ನೋಡಿಕೊಳ್ಳುವ ಈ ಕೈಗಡಿಯಾರವು, ಸಂಕಷ್ಟ ಎದುರಾದ ಸಂದರ್ಭದಲ್ಲಷ್ಟೇ ಅದ್ಭುತವಾಗಿ ಭದ್ರತಾ ಸಿಬ್ಬಂದಿಯಂತೆ ಕೆಲಸ ಮಾಡಿಬಿಡುತ್ತದೆ. ನಿಮ್ಮ ಪುಟಾಣಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತದೆ.
ಕೆಲಸದ ಬಗೆ ಹೀಗೆ : ಟ್ರೈಕೂ ವಾಚ್ನಲ್ಲಿ ಸ್ಮಾರ್ಟ್ ಲೊಕೇಟರ್ ಮತ್ತು ಬಿಲ್ಟ್ ಇನ್ ಫೋನ್ ಇರುತ್ತದೆ. ದಿನವಿಡೀ ಮಗು ಎಲ್ಲಿದೆ, ಏನೇನು ಮಾಡುತ್ತಿದೆ ಎಂಬುದನ್ನು ಪೋಷಕರಿಗೆ ಅದು ತಿಳಿಸುತ್ತಲೇ ಇರುತ್ತದೆ. ಈ ವಾಚ್ನಲ್ಲಿ ಇರುವ ಬಿಲ್ಟ್ ಇನ್ ಫೋನ್ ಬಗ್ಗೆ, ಅದು ದುರ್ಬಳಕೆ ಆಗುವ ಬಗ್ಗೆ ಚಿಂತೆ ಮಾಡಬೇಕಿಲ್ಲ. ಏಕೆಂದರೆ ಇದು ಮೊಬೈಲ್ ಫೋನ್ ಅಲ್ಲ. ಹೀಗಾಗಿ ಇದನ್ನು ಮಗು ದುರುಪಯೋಗ ಮಾಡುವ ಪ್ರಶ್ನೆಯೇ ಇಲ್ಲ. ಈ ವಾಚ್ನಲ್ಲಿ ಕೇವಲ ಮೂರು ಸಂಖ್ಯೆಗಳಿಗೆ (ಅಪ್ಪ, ಅಮ್ಮ ಮತ್ತು ತುರ್ತು ಸಂಪರ್ಕ ಸಂಖ್ಯೆಗೆ) ಮಾತ್ರ ಮಗು ಸಂಪರ್ಕ ಸಾಧಿಸಬಹುದಾದ ದ್ವಿಮುಖ ಸಂವಹನಾ ವ್ಯವಸ್ಥೆ ಇರುತ್ತದೆ. ಮಗು ಶಾಲೆಯಲ್ಲಿರಲಿ, ಇತರ ಎಲ್ಲೇ ಇರಲಿ, ಮಗುವಿನ ಯಾವ ಚಟುವಟಿಕೆಗಳಿಗೂ ಅಡ್ಡಿ ಆಗದ ರೀತಿಯಲ್ಲಿ ಈ ವಾಚ್ ತನ್ನ ಜಿಪಿಎಸ್ ತಂತ್ರಜ್ಞಾನದಿಂದ ಪೋಷಕರಿಗೆ ಮಾಹಿತಿ ರವಾನೆಯಾಗುತ್ತಲೇ ಇರುತ್ತದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಹಾಗೂ ವೆಬ್ ಆಧಾರಿತ ಟ್ರ್ಯಾಕಿಂಗ್ ಆಪ್ ಬಳಸಿಕೊಂಡು ಪೋಷಕರು ಈ ವ್ಯವಸ್ಥೆಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು. ಬ್ಲೂಟೂತ್ ಷೇರಿಂಗ್ ಮೂಲಕ ಮಕ್ಕಳೊಂದಿಗೆ ಎಲ್ಲ ಸಮಯದಲ್ಲೂ ಸಂಪರ್ಕದಲ್ಲಿ ಇರಬಹುದು. ನಿಮ್ಮ ಮೊಬೈಲ್ನ ಬ್ಲೂಟೂತ್ ರೇಂಜ್ ವ್ಯಾಪ್ತಿಯಿಂದ ಮಗು ಹೊರಗೆ ಹೋದ ತಕ್ಷಣ ಎಚ್ಚರಿಕೆ ಗಂಟೆ ಮೊಳಗುತ್ತದೆ. ವಾಯ್ಸ್ ಕಾಲ್/ ಜಿಪಿಎಸ್ ಲೊಕೇಷನ್ ಮೂಲಕ ಮಗು ಎಲ್ಲಿದೆ ಎಂಬ ಮಾಹಿತಿ ಮೊಬೈಲ್ಗೆ ಬರುತ್ತದೆ.
ಜಗತ್ತು ಇಂದು ರಾಕೆಟ್ ವೇಗದಲ್ಲಿ ಮುನ್ನಡೆಯುತ್ತಿದೆ. ಪೋಷಕರೂ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ, ಮಕ್ಕಳೂ ತಮ್ಮ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುತ್ತಾರೆ.
ಈ ಇಬ್ಬರ ನಡುವೆಯೂ ಅತ್ಯುತ್ತಮ ಸೇತುವೆ ರೀತಿಯಲ್ಲಿ ಈ ಆಧುನಿಕ ವಾಚ್ ಕೆಲಸ ಮಾಡುತ್ತದೆ. ಮಕ್ಕಳು ಶಾಲೆಯಲ್ಲಿರಲಿ, ಶಾಲಾ ಮೈದಾನದಲ್ಲಿರಲಿ, ಮಕ್ಕಳ ಸಹಜ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಈ ವಾಚ್ ಹೆತ್ತವರಿಗೆ ಮಗುವಿನ ಸಹಜ ಪ್ರಕ್ರಿಯೆಗಳನ್ನು ಕ್ಷಣ ಕ್ಷಣದ ರೀತಿಯಲ್ಲಿ ತಿಳಿಸುತ್ತಲೇ ಇರುತ್ತದೆ. ಮಗುವಿಗೂ ಅಷ್ಟೇ, ಕೇವಲ ಒಂದೇ ಒಂದು ಗುಂಡಿ ಒತ್ತಿದರೆ ತನ್ನ ಅಪ್ಪ ಮತ್ತು ಅಮ್ಮನ ಜತೆ ಮಾತನಾಡಬಹುದು. ಎಸ್ಒಎಸ್ ಗುಂಡಿಯ ಮೇಲೆ ಒಮ್ಮೆ ಕ್ಲಿಕ್ ಮಾಡಿದರೆ ಮಗುವಿಗೆ ಏನೋಅಪಾಯ ಎದುರಾಗಿದೆ ಎಂಬ ಸಂದೇಶ ಹೆತ್ತವರಿಗೆ ರವಾನೆಯಾಗುತ್ತದೆ.
ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಕಂಡಾಗ, ಕೇಳಿದಾಗ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಸದಾ ಆತಂಕ ಸಹಜ. ಇದಕ್ಕೆ ಉತ್ತಮ ಪರಿಹಾರ ಎಂಬಂತೆ ಸ್ಪ್ಯಾಚ್ ವಾಚ್ ಕೈಗೆ ಬಂದಿದೆ. ಹಿರಿಯ ನಾಗರಿಕರ ಸುರಕ್ಷತೆಯಲ್ಲೂ ಇದನ್ನು ಬಳಸಬಹುದಾಗಿದ್ದು ಉಲ್ಲೇಖನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.