ನವದೆಹಲಿ: ಆ್ಯಪಲ್ ತನ್ನ ನೂತನ iPhone 6S, 6S Plus ಬಿಡುಗಡೆಯಾದ 2 ತಿಂಗಳ ಬಳಿಕ ಇದರ ದರಗಳನ್ನು ಭಾರತದಲ್ಲಿ ಇಳಿಕೆ ಮಾಡಿದೆ. ದೀಪಾವಳಿ ಬಳಿಕ ತನ್ನ ಅತ್ಯಂತ ನಿರ್ಣಾಯಕ ತ್ರೈಮಾಸಿಕದಲ್ಲಿ ಈ ಮೊಬೈಲ್ಗಳ ದರಗಳನ್ನು ಶೇ.16ರಷ್ಟು ಕಡಿತಗೊಳಿಸಿದೆ.
ಅಕ್ಟೋಬರ್ 16ರಂದು ಪರಿಚಯಿಸಲಾಗಿದ್ದ 62,000 ಬೆಲೆಯ 16 ಜಿಬಿ ಮಾದರಿಯ 6S ಶೇ.11-16 ಇಳಿಕೆಯೊಂದಿಗೆ 52,000ದಿಂದ 55,000 ಇಳಿದಿದೆ. iPhone 6S, 6S Plus ಎರಡು ಮಾದರಿಯ 16 ಜಿಬಿ, 64 ಜಿಬಿ, 128 ಜಿಬಿ ಮೊಬೈಲ್ಗಳ ದರ ಕಡಿತಗೊಳಿಸಲಾಗಿದೆ. ಈ ಎರಡೂ ಫೋನ್ಗಳ ಬಿಡುಗಡೆ ವೇಳೆಯ ಬೆಲೆ ಮತ್ತು ಪ್ರಸಕ್ತ ಬೆಲೆಗಳಲ್ಲಿ ಶೇ.15 ವ್ಯತ್ಯಾಸ ಇರಲಿದೆ.
ಆ್ಯಪಲ್ ತನ್ನ iPhone 6S, 6S Plus ಮೊಬೈಲ್ಗಳ ದರ 62,000-92000 ಇದ್ದುದು, 6 ಮತ್ತು 6 Plus ಮಾದರಿಗಿಂತ ಸುಮಾರು 8000-9500 ಅಧಿಕವಾಗಿತ್ತು. ಆದರೆ ಅಮೇರಿಕ, ಹಾಂಕಾಂಗ್, ಮಿಡಲ್ ಈಸ್ಟ್ ರಾಷ್ಟ್ರಗಳಿಗೆ ಹೋಲಿಸಿದರೆ ಇದರ ದರ 14,000-16000 ಅಧಿಕವಾದೆ. ಭಾರತವು ಅಕ್ಟೋಬರ್ ತಿಂಗಳಿನಲ್ಲಿ ಸುಮಾರು 3,20,000 ಆ್ಯಪಲ್ ಮೊಬೈಲ್ಗಳನ್ನು ಆಮದು ಮಾಡಿದೆ. ಆ್ಯಪಲ್ iPhone 5s ದರ ಮೂರನೇ ಬಾರಿ ಕಡಿತಗೊಳಿಸಲಾಗಿದ್ದು, ಸದ್ಯ ಇದರ ಆರಂಭಿಕ ಬೆಲೆ 24,999 ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.