ನವದೆಹಲಿ: ನಿರ್ಭಯಾ ಪ್ರಕರಣದ ಬಾಲಪರಾಧಿ ಬಂಧಮುಕ್ತನಾದ ಬಳಿಕ ರಾಜ್ಯಸಭಾ ಸದಸ್ಯರುಗಳು ಎಚ್ಚೆತ್ತುಕೊಂಡಿದ್ದಾರೆ. ಬಾಲಪರಾಧಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸೋಮವಾರ ರಾಜ್ಯಸಭೆಯಲ್ಲಿ ಭಾರೀ ಒತ್ತಾಯಗಳು ಕೇಳಿ ಬಂದಿವೆ.
16-18 ವರ್ಷದ ನಡುವಿನ ವಯಸ್ಸಿನ ಬಾಲಕರು ಅಪರಾಧ ಕೃತ್ಯ ಎಸಗಿದಾಗ ಅವರಿಗೆ ವಯಸ್ಕರ ರೀತಿಯೇ ಶಿಕ್ಷೆಯನ್ನು ನೀಡುವ ಕಾಯ್ದೆ ಇದಾಗಿದೆ. ನಿರ್ಭಯಾ ಗ್ಯಾಂಗ್ರೇಪ್ ಬಳಿಕ ಈ ಕಾನೂನು ಜಾರಿಗೆ ಭಾರೀ ಒತ್ತಡಗಳು ಕೇಳಿ ಬಂದಿವೆ.
ಅಧಿವೇಶನ ಆರಂಭವಾಗಿ ಇಷ್ಟು ದಿನವಾದರೂ ಯಾವೊಬ್ಬ ಸಂಸದರು ಈ ಕಾನೂನು ಮಂಡಿಸುವ ಆಸಕ್ತಿಯನ್ನು ತೋರಿಸದೇ ಬರೇ ರಾಜಕೀಯದಲ್ಲಿ ಮುಳುಗಿ ಹೋಗಿದ್ದರು.
ಇದೀಗ ಸುಪ್ರೀಂಕೋರ್ಟ್ ಕಾನೂನು ಇಲ್ಲದೆ ಬಾಲಪರಾಧಿಯನ್ನು ಬಂಧನದಲ್ಲಿ ಇಡಲು ಸಾಧ್ಯವಿಲ್ಲ ಎಂದು ಹೇಳಿ ಆತನ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದಾಗಿ ರಾಜಕಾರಣಿಗಳ ವಿರುದ್ಧ ದೇಶವ್ಯಾಪಿ ಟೀಕೆಗಳು ವ್ಯಕ್ತವಾಗಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಗೊಳಿಸುವ ಬಗ್ಗೆ ವಿವಿಧ ಪಕ್ಷಗಳು ಪ್ರಸ್ತಾಪಿಸಿವೆ.
ನಾಳೆ ‘ಬಾಲಪರಾಧಿ ಕಾಯ್ದೆ’ ಚರ್ಚೆಗೆ ಸಮಯ ನಿಗಧಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.