ನವದೆಹಲಿ: ಮಹೀಂದ್ರ ತನ್ನ SUV, KUV100 ಕಾರನ್ನು ಜ.15ರಂದು ಬಿಡುಗಡೆ ಮಾಡಲಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಎಲ್ಲಾ ಮಹೀಂದ್ರ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್ ಆರಂಭಿಸಲಾಗಿದೆ. KUV100 ಏಳು ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
KUV100ನ ಎಲ್ಲಾ ಎಂಟು ವೈವಿಧ್ಯತೆಗಳ (4 ಡೀಸೆಲ್ ಹಾಗೂ 4 ಪೆಟ್ರೋಲ್) ಕಾರುಗಳು ಎಬಿಎಸ್ ಮತ್ತು ಏರ್ಬ್ಯಾಗ್ಗಳನ್ನು ಹೊಂದಲಿದ್ದು, ಅವು ಸ್ವಯಂಚಾಲಿತ ಮಾದರಿಗಳಾಗಿರುವುದಿಲ್ಲ ಎಂದು ಕಂಪೆನಿ ಹೇಳಿದೆ. 1.2 ಲೀಟರ್ mFalcon G80 ಪೆಟ್ರೋಲ್ ಇಂಜಿನ್ 82 ಬಿಎಚ್ಬಿ, 114 ಎನ್ಎಂ ಶಕ್ತಿ ಉತ್ಪಾದಿಸಲಿದ್ದು, ಅದೇ 1.2 ಲೀಟರ್ D75 ಡೀಸೆಲ್ ಇಂಜಿನ್ 77 ಬಿಎಚ್ಪಿ, 190 ಎನ್ಎಂ ಶಕ್ತಿ ಉತ್ಪಾದಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.