ಸಿಡ್ನಿ: ಇಲ್ಲಿನ ಆಸ್ಟೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್ ಮಿಶೆಲ್ ಗುತ್ರಿ ಅವರನ್ನು ತನ್ನ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಗೂಗಲ್ ಕಾರ್ಯನಿರ್ವಾಹರಾಗಿರುವ ಮಿಶೆಲ್ ಗುತ್ರಿ, ಸಾರ್ವಜನಿಕ ಪ್ರಸಾರಕ ABC ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆಯಾಗಿದ್ದಾರೆ.
ಮಾಧ್ಯಮ ಹಾಗೂ ತಂತ್ರಜ್ಞಾನಗಳ ಮಾಜಿ ವಕೀಲೆಯಾಗಿರುವ ಇವರು ಬ್ರಿಟನ್ನ Foxtel ಮತ್ತು BSkyB ಹಾಗೂ ಏಷ್ಯಾದ ಸ್ಟಾರ್ ಟಿವಿಗಳಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಿಶೆಲ್ ವಿವಿಧ ಸಂಸ್ಥೆಗಳಲ್ಲಿ, ಮಾಧ್ಯಮ ವೃತ್ತಿ, ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಾಧಾರಣ ಅನುಭವ ಹೊಂದಿದ್ದಾರೆ ಎಂದು ABC ಅಧ್ಯಕ್ಷ ಜಿಮ್ ಸ್ಪೈಜೆಲ್ಮನ್ ಹೇಳಿದ್ದಾರೆ.
ಮಿಶೆಲ್ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದು, ವ್ಯವಹಾರ, ಪ್ರೇಕ್ಷಕರ ಅಗತ್ಯವನ್ನು ತಿಳಿದುಕೊಳ್ಳುವ ಮತ್ತು ವೈವಿಧ್ಯತೆ, ಸಾಂಸ್ಥಿಕ ಜವಾಬ್ದಾರಿ ಹೊಂದಿದವರಾಗಿದ್ದಾರೆ. ಅವರು ಆಸ್ಟ್ರೇಲಿಯ ಮಾಧ್ಯಮದ ಅತ್ಯಂತ ಉನ್ನತ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮಿಶೆಲ್ 2011ರಲ್ಲಿ ಗೂಗಲ್ ಕಾರ್ಯನಿರ್ವಾಹಕರಾಗಿದ್ದು, ಪ್ರಸ್ತುತ ಸಿಂಗಾಪುರ ಮೂಲದ ಎಷ್ಯಾ-ಪೆಸಿಫಿಕ್ ಏಜೆನ್ಸಿಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.