ದೆಹಲಿ: ಭಾರತದಲ್ಲಿ ಯುವಕರು ಇಸಿಸ್ನತ್ತ ವಾಲುವುದನ್ನು ತಡೆಯಲು ಮುಸ್ಲಿಂ ಧರ್ಮಗುರುಗಳು, ಬುದ್ಧಜೀವಿಗಳು, ಸಮುದಾಯದ ನಾಯಕರುಗಳು, ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ರಾಷ್ಟ್ರವ್ಯಾಪಿ ಪ್ರಯತ್ನಗಳನ್ನು ಆರಂಭಿಸಿದೆ.
ಐಟಿ, ಸಮಾಜ ಕಲ್ಯಾಣ, ಗೃಹ ಮತ್ತು ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ ಹೀಗೆ ಎಲ್ಲರೂ ಸೇರಿ ಭಾರತದಿಂದ ಇಸಿಸ್ ಚಿಗುರನ್ನು ಹೊಡೆದೊಡಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಇಸಿಸ್ ತಡೆಗೆ ರಾಜ್ಯಸರ್ಕಾರಗಳು, ಪೊಲೀಸ್ ಪಡೆಗಳು ಯಾವ ಕ್ರಮಗಳನ್ನು ಜರುಗಿಸಿವೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಖಾತೆ ರಾಜ್ಯ ಸಚಿವ ಕಿರನ್ ರಿಜ್ಜು ನಿರಂತರವಾಗಿ ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ.
ಗುಜರಾತಿನ ಕಚ್ಛ್ನಲ್ಲಿ ನಡೆಯುತ್ತಿರುವ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆಗೊಳಪಟ್ಟಿದೆ. ಮಹಾರಾಷ್ಟ್ರ, ಗುಜರಾತ್, ಕೇರಳ, ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಒರಿಸ್ಸಾಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಸೈಬರ್ ಸ್ಪೇಸ್ಗಳನ್ನು ಬಳಕೆ ಮಾಡಿ ಇಸಿಸ್ನ ನೈಜ ಮುಖದ ಪರಿಚಯ ಮಾಡಿಕೊಡುವುದು ಮತ್ತು ನಿಜವಾದ ಇಸ್ಲಾಂ ಬಗೆಗೆ ಮಾಹಿತಿ ನೀಡುವ ಕಾರ್ಯವೂ ನಡೆಯುತ್ತಿದೆ.
ಧರ್ಮದ ಹೆಸರಲ್ಲಿ ಇಸಿಸ್ ಮಾಡುವ ಕುತಂತ್ರಕ್ಕೆ ಭಾರತದ ಯುವಕರು ಬಲಿಯಾಗಬಾರದು ಎಂಬ ಉದ್ದೇಶದಿಂದ ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.