ಜಿಂದ್: ಕಾಪ್ ಪಂಚಾಯತ್ಗಳು ಸದಾ ಅಸಂಬದ್ಧ ಮತ್ತು ಕಾನೂನಿಗೆ ವಿರುದ್ಧವಾದ ತೀರ್ಪುಗಳನ್ನು ಪ್ರಕಟಿಸಿ ಟೀಕೆಗೆ ಗುರಿಯಾಗುತ್ತವೆ. ಇವುಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗುಗಳೂ ಕೇಳಿ ಬರುತ್ತವೆ. ಆದರೆ ಅಪರೂಪಕ್ಕೆ ಎಂಬಂತೆ ಹರಿಯಾಣದ ಜಿಂದ್ನಲ್ಲಿನ ಕಾಪ್ ಪಂಚಾಯತ್ವೊಂದು ಪ್ರಗತಿಪರವಾದ ಆದೇಶವನ್ನು ಹೊರಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇಬ್ಬರು ಹೆಣ್ಣುಮಕ್ಕಳು ಜನಿಸಿದ ಬಳಿಕ 3ನೇ ಮಗುವನ್ನು ಪಡೆಯದ ದಂಪತಿಗೆ ಇದು ಸನ್ಮಾನ ಮಾಡಿದೆ. ಮಾತ್ರವಲ್ಲ ಹೆಣ್ಣಿನ ಕಡೆಯವರಿಂದ ಗಂಡು ಕೇವಲ 1 ರೂಪಾಯಿ ಮಾತ್ರ ವರದಕ್ಷಿಣಿ ಪಡೆಯಬೇಕೆಂದು ಆದೇಶ ಹೊರಡಿಸಿದೆ. ಅಲ್ಲದೇ ಮದುವೆಯ ವೇಳೆ ಹೆಣ್ಣಿನ ಮನೆಗೆ ಮೆರವಣಿಗೆ ಬರುವ ಜನರ ಮಿತಿಯನ್ನು 21ಕ್ಕೆ ಸೀಮಿತಗೊಳಿಸಿದ. ಹೆಣ್ಣಿನ ಮನೆಯವರ ಖರ್ಚನ್ನು ಕಡಿಮೆಗೊಳಿಸುವುದಕ್ಕಾಗಿ ಈ ಕ್ರಮ.
ಸಾವಿನ ವೇಳೆ ಕುಟುಂಬಿಕರು ಆಚರಿಸುವ ಸಂತಾಪದ ದಿನಗಳನ್ನು 13ರಿಂದ 7ಕ್ಕೆ ಇಳಿಸಿದೆ, ಅಲ್ಲದೇ ಈ ವೇಳೆ ತುಪ್ಪ, ಗೋಧಿ, ದವಸಧಾನ್ಯ ತಿನ್ನಬಾರದು ಎಬ ನಿಯಮವನ್ನು ರದ್ದು ಮಾಡಿದೆ. ಕ್ರೀಡಾಳುಗಳಿಗೆ, ಹೋರಾಟಗಾರರಿಗೆ ಮತ್ತು ಬರಹಗಾರರಿಗೆ ಸನ್ಮಾನ ಮಾಡುವ ನಿರ್ಧಾರವನ್ನು ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.