ಅಯೋಧ್ಯಾ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾರ್ಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಿದೆ.
ರಾಮ ಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಸಂಗ್ರಹಿಸುವ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಆರು ತಿಂಗಳ ಹಿಂದೆ ವಿಎಚ್ಪಿ ಕರೆ ನೀಡಿತ್ತು. ಇದೀಗ ಎರಡು ಲೋಡ್ ಕಲ್ಲುಗಳನ್ನು ಅಯೋಧ್ಯಾದಲ್ಲಿನ ವಿಎಚ್ಪಿ ಭೂಮಿ ರಾಮ್ ಸೇವಕ್ ಪುರಂಗೆ ತಂದು ಹಾಕಿದೆ. ಅಲ್ಲದೇ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ನೇತೃತ್ವದಲ್ಲಿ ಶಿಲಾ ಪೂಜೆಯನ್ನೂ ನೆರವೇರಿಸಿದೆ.
‘ಈಗ ರಾಮಮಂದಿರಕ್ಕೆ ಸಮಯಾವಕಾಶ ಸಿಕ್ಕಿದೆ. ಬಹಳಷ್ಟು ಕಲ್ಲುಗಳು ಇಲ್ಲಿಗೆ ಆಗಮಿಸಿವೆ. ಇನ್ನು ಮುಂದೆಯೂ ಕಲ್ಲುಗಳು ಬರುತ್ತವೆ. ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ ಸರ್ಕಾರದ ಗ್ರೀನ್ ಸಿಗ್ನಲ್ ಕೂಡ ಇದೆ’ ಎಂದು ವಿಎಚ್ಪಿ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.
ಕಲ್ಲುಗಳನ್ನು ತಂದು ಖಾಸಗಿ ಜಾಗದಲ್ಲಿ ಹಾಕಲಾಗಿದೆ, ನಾವು ಪರಿಸ್ಥತಿಯನ್ನು ಅವಲೋಕಿಸುತ್ತಿದ್ದೇವೆ. ಕೋಮು ಸಾಮರಸ್ಯ ಹದಗೆಟ್ಟರೆ, ಅಹಿತರ ಘಟನೆ ನಡೆದರೆ ತಕ್ಷಣ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗುಪ್ತಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.