ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಉತ್ತಮ ಆಡಳಿತ (good governance) ಪ್ರಯತ್ನಗಳ ಭಾಗವಾಗಿ ಸಿಬಿಎಸ್ಸಿ ಪುಸ್ತಕಗಳು ಉಚಿತವಾಗಿ ಆನ್ಲೈನ್ನಲ್ಲಿ ಲಭ್ಯವಾಗಲಿದೆ ಎಂದು ಮಶನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಉತ್ತಮ ನಿರ್ವಹಣೆಗೆ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂದು ಹೇಳಿದ್ದಾರೆ.
ಈ ಹಿಂದೆ ಆನ್ಲೈನ್ ಮತ್ತು ಮೊಬೈಲ್ ಆಪ್ ಮೂಲಕ ಎನ್ಸಿಇಆರ್ಟಿ ಪುಸ್ತಕಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿದ್ದು, ಇನ್ನು ಮುಂದೆ ಸಿಬಿಎಸ್ಸಿ ಪುಸ್ತಕಗಳು, ವೀಡಿಯೋಗಳು ಕೂಡ ಆನ್ಲೈನ್ನಲ್ಲಿ ಲಭ್ಯವಾಗಲಿದೆ. ಇದರಿಂದ ಮಕ್ಕಳು ಹಾಗೂ ವೃತ್ತಿಪರರ ನಡುವೆ ಪರಸ್ಪರ ವಿಷಯಗಳ ವಿನಿಮಯವಾಗಲಿದ್ದು, ಮಕ್ಕಳು ಸಮಾಜದಲ್ಲಿ ಉತ್ತಮರಾಗಲು ಸಹಕಾರಿಯಾಗಲಿದೆ ಎಂದು ಇರಾನಿ ಹೇಳಿದ್ದಾರೆ.
ಸಿಬಿಎಸ್ಸಿ ಶಾಲೆಗಳ 1ನೇ ತರಗತಿಯಿಂದ 12ನೇ ತರಗತಿ ವೆಡಗಿನ ವಿದ್ಯಾರ್ಥಿಗಳಿಗೆ ’ಶಾಲಾ ದರ್ಪಣ್’ ಹಾಗೂ ’ಸಾರಾಂಶ್’ ಉಪಕ್ರಮಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಿದೆ. ಶಾಲಾ ದರ್ಪಣ್ (Shaala Darpan) ಮೊಬೈಲ್ ಎಸ್ಎಂಎಸ್ ಸೇವೆಯ ಮೂಲಕ ಪೋಷಕರು ತಮ್ಮ ಮಕ್ಕಳ ಹಾಜರಾತಿ, ಪಠ್ಯಕ್ರಮ, ಪರೀಕ್ಷಾ ಅಂಕಗಳನ್ನು ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿ ’ಸರಾಂಶ್’ (Saaransh) ಸಹಾಯದಿಂದ ಪೋಷಕರು ಮಕ್ಕಳ ಪ್ರತ್ಯೇಕ ವಿಷಯಗಳ ಫಲಿತಾಂಶ, ಸಾಮರ್ಥ್ಯವನ್ನು ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಸಬಹುದು. ಇದರ ಜೊತೆಗೆ ‘ಬಾಲ್ ಸಭಾ’ವನ್ನೂ ಆಯೋಜಿಸಲಾಗಿದೆ.
ಇದು ಹಿಂದಿನ ಬಾರಿ ಪಡೆದ ಫಲಿತಾಂಶಕ್ಕಿಂತ ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ ಎಂದು ತಿಳಿದುಕೊಳ್ಳುವ ಮೂಲಕ ಉತ್ತಮ ನಡೆ, ಗುಣಗಳೊಂದಿದೆ ಮುನ್ನಡೆಯಲು ಸಾಧ್ಯವಾಗಲಿದೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.