ನವದೆಹಲಿ: ಚಲಿಗಾಲದ ಅಧಿವೇಶನ ಇನ್ನು 3 ದಿನಗಳಲ್ಲಿ ಮುಕ್ತಾಯವಾಗಲಿದೆ, ಈ ವೇಳೆಯೂ ಮಹತ್ವದ ಜಿಎಸ್ಟಿ ಕಾಯ್ದೆ ಮಂಡನೆಗೆ ಬರುವ ಸೂಚನೆಗಳಿಲ್ಲ. ಕಾಂಗ್ರೆಸ್ನ ಅಸೂಯೆಯ ರಾಜಕಾರಣದಿಂದಲೇ ಮಸೂದೆ ಮಂಡನೆಗೊಂಡಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ಈ ಅಧಿವೇಶನದಲ್ಲಿ ಮಂಡನೆಗೊಳ್ಳುವುದು ಅಸಾಧ್ಯವಾದರೂ, ಮುಂದಿನ 3 ದಿನದಲ್ಲಿ ಉಳಿದ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡನೆಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದಿದ್ದಾರೆ.
ತಮ್ಮ ಅಧಿಕಾರವಧಿಯಲ್ಲಿ ಮಂಡನೆಗೊಳಿಸಲಾಗದ ಮಸೂದೆಗಳನ್ನು ಇತರರು ಮಂಡನೆಗೊಳಿಸಿ ಅದರ ಹೆಗ್ಗಳಿಕೆಯನ್ನು ಪಡೆಯಬಾರದು ಎಂಬ ದೃಷ್ಟಿಯಿಂದ ಕಾಂಗ್ರೆಸ್ ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಇದು ಕಾಂಗ್ರೆಸ್ನ ಅಸೂಯೆಯ ಭಾವವನ್ನು ತೋರಿಸುತ್ತದೆ ಎಂದಿದ್ದಾರೆ.
ರಾಜಕೀಯ ದೇಶದ ಹಿತಾಸಕ್ತಿ ಎಂದಿಗೂ ಮಾರಕವಾಗಿ ಪರಿಣಮಿಸಬಾರದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.