ಗೋಪಾಲ್ಗಂಜ್: ವಿಧವೆ ಎಂಬ ಕಾರಣಕ್ಕೆ 36 ವರ್ಷದ ಸುನೀತ ಕುವರ್ ಗೋಪಾಲ್ಗಂಜ್ನ ಬರೌಲಿ ಶಾಲೆಯಲ್ಲಿ ಸಿಕ್ಕಿದ್ದ ಬಿಸಿಯೂಟ ತಯಾರಿ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.
ಮದುವೆಯಾಗಿ 3 ವರ್ಷಗಳ ಬಳಿಕ ಆಕೆ ತನ್ನ ಗಂಡನನ್ನು ಕಳೆದುಕೊಂಡಳು. ಇದೀಗ ಆಕೆಯ ಗಂಡ ಸತ್ತು 15 ವರ್ಷಗಳು ಹೆಚ್ಚಾಗಿದೆ. ಇಬ್ಬರು ಮಕ್ಕಳನ್ನು ಹೊಂದಿರುವ ಆಕೆಗೆ ಸಂಸಾರ ನಡೆಸಲು ದುಡಿಯಲೇ ಬೇಕಾದ ಅನಿವಾರ್ಯತೆ. ಏಳು ವರ್ಷಗಳ ಹಿಂದೆ ಶಾಲೆಯಲ್ಲಿ ಬಿಸಿಯೂಟ ತಯಾರಿಸಿಕೊಡುವ ಕೆಲಸ ಆಕೆಗೆ ಸಿಕ್ಕಿತ್ತು. ತಿಂಗಳಿಗೆ 1 ಸಾವಿರ ಇದರಿಂದ ಆಕೆಗೆ ದೊರೆಯುತ್ತಿತ್ತು.
ಹೀಗೆ ಐದು ವರ್ಷ ಅಡುಗೆ ಕೆಲಸ ಮಾಡಿಕೊಂಡಿದ್ದ ಆಕೆಯ ವಿರುದ್ಧ ಕೆಲವರು ಉಹಾಪೋಹಗಳನ್ನು ಹಬ್ಬಿಸಿದರು. ವಿಧವೆಯಾಗಿರುವ ಆಕೆ ತಕ್ಷಣ ಕೆಲಸ ಮಾಡಬೇಕು ಎಂದು ಕೆಲ ಗ್ರಾಮಸ್ಥರು ಆಗ್ರಹಿಸಿದರು. ಹಳ್ಳಿಯ ಮುಖಂಡ ಆಕೆಯನ್ನು ಕೆಲಸದಿಂದ ಉಚ್ಛಾಟಿಸುವಂತೆ ಮಾಡಿದ.
ಇದರ ವಿರುದ್ಧ ಸುನೀತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೀಗ ಕೆಲಸ ಕಳೆದುಕೊಂಡ ಎರಡು ವರ್ಷಗಳ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಹುಲ್ ಕುಮಾರ್ ಆಕೆಗೆ ಮರಳಿ ಉದ್ಯೋಗ ಸಿಗುವಂತೆ ಮಾಡಿದ್ದಾರೆ.
ಖುದ್ದಾಗಿ ಶಾಲೆಗೆ ಆಗಮಿಸಿ ಆಕೆಯಿಂದ ಅಡುಗೆ ತಯಾರಿಸಿದ್ದಾರೆ, ಆಕೆ ಮಾಡಿದ ಅಡುಗೆಯನ್ನು ತಾನೇ ಸ್ವತಃ ಸೇವಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೇ ಸುನೀತ ವಿರುದ್ಧ ನಡೆದುಕೊಂಡರೆ ಪರಿಣಾಮ ಚೆನ್ನಾಗಿ ಇರಲ್ಲ ಎಂದು ಗ್ರಾಮದ ಮುಖಂಡರುಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.