ಬೆಂಗಳೂರು : ರಾಜ್ಯ ಸರಕಾರಕ್ಕೆ ಗಜಪ್ರಸವವಾಗಿ ಪರಿಣಮಿಸಿದ್ದ ಉಪಲೋಕಾಯುಕ್ತರ ಆಯ್ಕೆ ಕೊನೆಗೂ ಕೊನೆಗೊಂಡಿದ್ದು ನ್ಯಾ.ಆನಂದ್ ಅವರು ಉಪಲೋಕಾಯುಕ್ತರಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೊದಲಿಗೆ ರಾಜ್ಯಸರಕಾರದ ಮುಖ್ಯ ಕಾರ್ಯದರ್ಶಿಯವರು ಉಪಲೋಕಾಯುಕ್ತರಾಗಿ ಆನಂದ್ ಅವರ ನೇಮಕಾತಿ ಆದೇಶವನ್ನು ವಾಚಿಸಿದರು. ತದನಂತರ ನ್ಯಾ.ಆನಂದ್ರವರು ಉಪಲೋಕಾಯುಕ್ತ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ತನ್ನ ಕಚೇರಿಗೆ ತೆರಳಿ ಅಧಿಕಾರವನ್ನು ವಹಿಸಿಕೊಂಡು, ತನ್ನ ಸಹುದ್ಯೋಗಿಗಳ ಪರಿಚಯವನ್ನು ಮಾಡಿಕೊಂಡರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಕಚೇರಿಯ ಬಾಗಿಲುಗಳು ನ್ಯಾಯವನ್ನು ಬಯಸಿ ಬರುವವರಿಗೆ ಯಾವಾಗಲೂ ತೆರೆದಿರುತ್ತದೆ. ಲೋಕಾಯಕ್ತ ಸಂಸ್ಥೆ ಇರುವುದೇ ನ್ಯಾಯ ನೀಡುವುದಕ್ಕಾಗಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.