ಸಿಡ್ನಿ: ಭಾರತೀಯರನ್ನು ಅವಮಾನಿಸುವಂತಹ ಕಾರ್ಟೂನ್ವೊಂದನ್ನು ಆಸ್ಟ್ರೇಲಿಯನ್ ಪತ್ರಿಕೆ ಪ್ರಕಟಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ತಲೆ ಮುಂಡಾಸು, ಧೋತಿ ಧರಿಸಿದ ಕೃಶ ದೇಹದ ವ್ಯಕ್ತಿಗಳು ಸೋಲಾರ್ ಪ್ಯಾನಲ್ಗಳನ್ನು ತುಂಡು ತುಂಡು ಮಾಡಿ ತಿನ್ನುತ್ತಿರುವಂತೆ ಕಾರ್ಟೂನ್ ಬಿಡಿಸಲಾಗಿದೆ. ಬಿಲ್ ಲೀಕ್ಸ್ ಎಂಬುವವರು ಈ ಕಾರ್ಟೂನ್ ಬಿಡಿಸಿದ್ದಾರೆ.
ಕಳೆದ ವಾರ ಪ್ಯಾರೀಸ್ನಲ್ಲಿ ನಡೆದ ಹವಮಾನ ಬದಲಾವಣೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಕಾರ್ಟೂನ್ ಬಿಡಿಸಲಾಗಿದೆ.
ಮುಂದುವರೆಯುತ್ತಿರುವ ದೇಶ ಭಾರತದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಕಳುಹಿಸಿಕೊಡಲಾದ ಸೋಲಾರ್ ಪ್ಯಾನಲ್ಗಳ ಬಗ್ಗೆ ಭಾರತೀಯರಿಗೆ ಅರಿವಿಲ್ಲ, ಅವರಿಗೆ ತಂತ್ರಜ್ಞಾನದ ಅರಿವಿಲ್ಲ ಎಂಬ ಅರ್ಥದಲ್ಲಿ ಈ ಕಾರ್ಟೂನ್ ರಚಿಸಲಾಗಿದೆ.
ಅವಮಾನಕರವಾದ ಈ ಕಾರ್ಟೂನ್ಗೆ ಜಗತ್ತಿನಾದ್ಯಂತದಿಂದ ಖಂಡನೆಗಳು ವ್ಯಕ್ತವಾಗಿದೆ. ಆದರೆ ಪತ್ರಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇದನ್ನು ಸಮರ್ಥಿಸಿಕೊಂಡಿದೆ.
ಇದೊಂದು ಜನಾಂಗೀಯ ನಿಂದನೆಯುಳ್ಳ ಕಾರ್ಟೂಟ್, ಇದು ಆಸ್ಟ್ರೇಲಿಯನ್ನರ ಮುಂದುವರೆಯುತ್ತಿರುವ ರಾಷ್ಟ್ರಗಳನ್ನು ಅವಮಾನಿಸುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಕೈರಿ ವಿಶ್ವವಿದ್ಯಾನಿಲಯದ ಪ್ರೋಫೆಸರ್ ಅಮಂಡಾ ವೈಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.