ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ತಪ್ಪಿತಸ್ಥಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದೆ, ಸಲ್ಮಾನ್ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ನ್ಯಾಯಾಲಯದ ಈ ತೀರ್ಪು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
2002ರಲ್ಲಿ ನಡೆದ ಈ ಪ್ರಕರಣದಲ್ಲಿ ಸಾವಿಗೀಡಾದ ನೂರುಲ್ಲಾಹ ಖಾನ್ ಕುಟುಂಬ, ಸಲ್ಮಾನ್ ನಿರಪರಾಧಿ ಎಂಬ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಸಲ್ಮಾನ್ ತಪ್ಪಿತಸ್ಥ ಅಲ್ಲ ಎಂದಾದರೆ ನಮ್ಮ ತಂದೆಯನ್ನು ಕೊಂದವರು ಯಾರು? ಎಂಬ ಪ್ರಶ್ನೆಯನ್ನು ಮೃತರ ಮಗ ಪಿರೋಝ್ ಶೇಖ್ ಮುಂದಿಟ್ಟಿದ್ದಾನೆ.
2002ರ ಸೆಪ್ಟಂಬರ್ನಲ್ಲಿ ನಡೆದ ಘಟನೆಯಲ್ಲಿ ಸಲ್ಮಾನ್ ಕಾರಿನಡಿ ಸಿಕ್ಕು ನೂರುಲ್ಲಾಹ ಮೃತರಾಗಿದ್ದಾರೆ, ಉಳಿದ ನಾಲ್ವರು ಗಾಯಗೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಸುಧೀರ್ಘ 13 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಆದರೂ ನೂರುಲ್ಲಾಹರ ಮೇಲೆ ಕಾರು ಹತ್ತಿಸಿದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗದೇ ಇರುವುದು ದುರಾದೃಷ್ಟವೇ ಸರಿ.
‘ನಾನು ಸಲ್ಮಾನ್ ಅವರು ಕ್ಷಮಿಸುತ್ತೇನೆ ಆದರೆ ನನ್ನ ತಂದೆಯನ್ನು ನಿಜವಾಗಿಯೂ ಯಾರು ಕೊಂದರು ಎಂಬುದು ನನಗೆ ಬೇಕಾಗಿದೆ, 13 ವರ್ಷಗಳಿಂದ ನನ್ನ ಆ ಪ್ರಶ್ನೆ ಹಾಗೆಯೇ ಉಳಿದಿದೆ, ಉತ್ತರ ಇನ್ನು ಸಿಗಬೇಕಾಗಿದೆ’ ಎಂದು ಶೇಖ್ ಬೇಸರ ವ್ಯಕ್ತಪಡಿಸಿದ್ದಾರೆ.
ಶೇಖ್ ಮಾತ್ರವಲ್ಲ ದೇಶದ ಹಲವಾರು ಜನರು ಟ್ವಿಟರ್, ಫೇಸ್ಬುಕ್ನಲ್ಲಿ ಇಂತಹುದೇ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.